ಬೆಂಗಳೂರು : ಏಷ್ಯನ್ ವಾಲಿಬಾಲ್ ಚಾಂಪಿಯನ್ಶಿಪ್ ತೆಕ್ಕನ್ ಒಬಗಿಸ್ತಾನ್ ನಲ್ಲಿ ಇದೇ ಬರುವ ಜುಲೈ 22 ರಿಂದ 29ರ ವರಗೆ ನಡೆಯಲಿರುವ 16 ವರ್ಷ ವಯೋಮಿತಿಯ ಹುಡುಗರ ಭಾರತೀಯ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಓಡಿಸ್ಸಾ ಭುವನೇಶ್ವರದ ಕಿಟ್ ಯೂನಿವರ್ಸಿಟಿಯಲ್ಲಿ ಇದೇ ಬರುವ ಜೂನ್ ತಿಂಗಳ 20 ಮತ್ತು 21 ರಂದು ನಡೆಯಲಿದೆ.
ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಹೊರಡಿಸಿರುವ ಆದೇಶ ಪ್ರಕಾರ. ಕರ್ನಾಟಕ ರಾಜ್ಯದ 16 ವರ್ಷದ ಹುಡುಗರು ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಬಹುದು. ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಅಡಾ ಕಮಿಟಿಯ ಚೇರ್ಮನ್ ಮತ್ತು ಕನ್ವೀನರ್ ರಾದ ಆಂಥೋನಿ ಜೋಸೆಫ್ ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ವಾಲಿಬಾಲ್ ಎಸೋಸಿಯೇಷನ್ ಇದರ ಅಡಾ ಕಮಿಟಿ ಸದಸ್ಯರಾದ ಎಂ .ಎಂ .ಗುಡಿ ಇವರನ್ನು ಸಂಪರ್ಕಿಸಬಹುದಾಗಿದೆ.

ಆಟಗಾರರಿಗೆ ವಿಶೇಷ ಸೂಚನೆ :
01 .01.2008. ಜನನ ಹೊಂದಿರಬೇಕು.
ಮಾನ್ಯತೆ ಇರುವ ಪಾಸ್ಪೋರ್ಟ್ ಹೊಂದಿರಬೇಕು.
ಒರಿಜಿನಲ್ ಜನನ ಸರ್ಟಿಫಿಕೇಟ್ ಹೊಂದಿರಬೇಕು.
ಐದು ಪಾಸ್ಪೋರ್ಟ್ ಸೈಜ್ ಫೋಟೋ ಇರತಕ್ಕದ್ದು.
ಆಯ್ಕೆ ಪ್ರಕ್ರಿಯೆ ಪ್ರಯಾಣಿಸುವ ವೆಚ್ಚ ಅವರೇ ಬರಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಅಂತೋನಿ ಜೋಸೆಫ್ +91 98450 09183, ಎಂ ಎಂ ಗುಡಿ + 91 98809 94849 ರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಚೇರ್ಮನ್ ಮತ್ತು ಕನ್ವೀನರಾದ ಆಂಟೋನಿ ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























