ಪುತ್ತೂರು : ಯಡಿಯೂರಪ್ಪನವರು ಮುಖ್ಯಮಂತ್ರಿ ಹಾಗೂ ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 55 ಕೋಟಿ ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಿಂಡಿ ಆಣೆಕಟ್ಟನ್ನು ನಿರ್ಮಾಣ ಮಾಡಲು ಅನುದಾನ ನೀಡಿದ್ದು, ಈ ಕಿಂಡಿ ಆಣೆಕಟ್ಟಿನಲ್ಲಿ ಈ ಬಾರಿ ಸುಮಾರು 8 ಕಿಮೀ ನಷ್ಟು ನೀರು ನಿಲುಗಡೆಯಾಗಿದೆ ಎಂದು ಕಿಂಡಿ ಆಣೆಕಟ್ಟಿಗೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಕಿಂಡಿ ಆಣೆಕಟ್ಟು ಹಾಗೂ ಸೇತುವೆ ಪೂರ್ಣಗೊಂಡು ಪುತ್ತೂರು ವಿಧಾನಸಭಾ ಕ್ಷೇತ್ರದ 8,9 ಗ್ರಾಮಗಳಿಗೆ 8 ಕಿ.ಮೀ ನೀರು ಶೇಖರಣೆಯಾಗಿ ಕುಡಿಯುವ ನೀರು, ಕೃಷಿ ಮತ್ತು ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ಪೂರಕವಾಗಿದೆ.

ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ವಿಶೇಷವಾಗಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೂ ಪೂರಕವಾಗಿದ್ದು, ಈ ಯೋಜನೆಯನ್ನು ಬೆಳ್ತಂಗಡಿಯಲ್ಲಿ ಶಾಸಕರು ಅನುಷ್ಠಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರು ತಾಲೂಕಿನ ಎಲ್ಲ ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ನೀರಿನ ಲಭ್ಯತೆಯನ್ನು ನೋಡಿಕೊಂಡು ಅನುಷ್ಠಾನ ಮಾಡಬಹುದು., ಇಂದು ಆ ಯೋಜನೆಯಿಂದ 8 ಕಿ.ಮೀ. ಶೇಖರಣೆಯಾಗಿ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಕೂಡ ಜಲರಾಶಿಯನ್ನು ನೋಡಬಹುದು ಎಂದು ಹರ್ಷ ವ್ಯಕ್ತಪಡಿಸಿದರು.

ಪುತ್ತೂರು ತಾಲೂಕಿನ ಕೃಷಿಕರಿಗೆ ಮುಂದಿನ ದಿನಗಳಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಈ ಬೃಹತ್ ಕಾಮಗಾರಿ ಪೂರಕವಾಗಲಿದೆ. ಇಂತಹ ಯೋಜನೆಯನ್ನು ನೀಡಿದಂತಹ ಯಡಿಯೂರಪ್ಪ ಹಾಗೂ ಮಾಧುಸ್ವಾಮಿ ರವರಿಗೆ ಧನ್ಯವಾದಗಳು.., ಇಂತಹ ಕಾಮಗಾರಿ ಮುಂದಿನ ದಿನಗಳಲ್ಲಿ ಪುತ್ತೂರಿನ ಜನತೆಗೆ ವರದಾನವಾಗಿ ಪರಿಣಮಿಸಲಿ., ಹಾಗೆ ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಕಿಂಡಿ ಆಣೆಕಟ್ಟಿನಲ್ಲಿ ಶೇಖರಣೆಗೊಂಡಿದ್ದ ನೀರನ್ನು ಕೆಲದಿನಗಳ ಹಿಂದೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.




























