ಪುತ್ತೂರು : ಪುತ್ತೂರು ವಲಯ ಬ್ಯೂಟಿಪಾರ್ಲರ್ ನೂತನ ಸಮಿತಿ ರಚನೆ ಸಭೆಯು ಜೂ.20 ರಂದು ಪುತ್ತೂರು ಶ್ರೀ ಧರ್ಮಸ್ಥಳ ಬಿಲ್ಡಿಂಗ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಬ್ಯೂಟಿಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಬಬಿತಾ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಮೂಲಕ ಪ್ರತಿಯೊಬ್ಬರು ಒಂದಾಗಿ ಕಾರ್ಯ ನಿರ್ವಹಿಸಬೇಕು. ಬ್ಯೂಟಿಪಾರ್ಲರ್‌ನ ಆವಶ್ಯಕತೆಗಳಿಗೆ ಅನುಗುಣವಾಗಿ ಸಮಿತಿಯು ಕಾರ್ಯಚಟುವಟಿಕೆ ಹಮ್ಮಿಕೊಳ್ಳಬೇಕು ಎಂದರು. ಮಂಗಳೂರು ಬ್ಯೂಟಿಪಾರ್ಲರ್ ಅಸೋಸಿಯೇಷನ್ ಉಪಾಧ್ಯಕ್ಷೆ ಸುಲತಾ ಉಪಸ್ಥಿತರಿದ್ದರು.

ಪುತ್ತೂರು ವಲಯ ಸಮಿತಿ ರಚನೆ
ಪುತ್ತೂರು ವಲಯ ಬ್ಯೂಟಿಪಾರ್ಲರ್ ನೂತನ ಸಮಿತಿ ಅಧ್ಯಕ್ಷೆಯಾಗಿ ತಾರುಣ್ಯ ಬ್ಯೂಟಿಪಾರ್ಲರ್‌ನ ನಿಶ್ಚಲ ಆಳ್ವ, ಉಪಾಧ್ಯಕ್ಷೆಯಾಗಿ ಸೌಂದರ್ಯ ಬ್ಯೂಟಿಪಾರ್ಲರ್‌ನ ಹೇಮಾ ಜಯರಾಮ್, ಕಾರ್ಯದರ್ಶಿಯಾಗಿ ಶ್ರೀಮಾ ಬ್ಯೂಟಿಪಾರ್ಲರ್‌ನ ಮಾಧವಿ ಮನೋಹರ ರೈ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಬ್ಯೂಟಿಪಾರ್ಲರ್‌ನ ಅಶ್ವಿನಿ ಆಳ್ವ, ಖಜಾಂಜಿಯಾಗಿ ಐಶ್ವರ್ಯ ಬ್ಯೂಟಿಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ ಆಯ್ಕೆಯಾದರು. ವಲಯ ಸಮಿತಿಗೆ ಉಪ್ಪಿನಂಗಡಿ ಪ್ರಗತಿ ಬ್ಯೂಟಿಪಾರ್ಲರ್‌ನ ಮಾಧವಿ, ಆಲಂಗಾರಿನ ದೀಕ್ಷಾ ಬ್ಯೂಟಿಪಾರ್ಲರ್‌ನ ದೀಕ್ಷಾ, ವಿಟ್ಲದ ಫೇಮ್ಸ್ ಬ್ಯೂಟಿಪಾರ್ಲರ್‌ನ ಯಶೋಧಾ, ವಿಟ್ಲದ ಲಕ್ಷಿ÷್ಮ ಬ್ಯೂಟಿಪಾರ್ಲರ್‌ನ ಪೂರ್ಣಿಮಾ, ಪುತ್ತೂರು ಉಷಾಸ್ ಬ್ಯೂಟಿಪಾರ್ಲರ್‌ನ ಉಷಾ, ಶಿಖಾ ಬ್ಯೂಟಿಪಾರ್ಲರ್ ಪ್ರಮೀಳಾ, ಸಮೃದ್ಧಿ ಬ್ಯೂಟಿಪಾರ್ಲರ್‌ನ ಸುಪ್ರಿತಾ ಅವರು ಆಯ್ಕೆಯಾದರು. ಕಾರ್ಯದರ್ಶಿ ಮಾಧವಿ ಮನೋಹರ್ ರೈ ಸ್ವಾಗತಿಸಿ, ಉಪಾಧ್ಯಕ್ಷೆ ಹೇಮಾ ಜಯರಾಮ್ ನಿರೂಪಿಸಿದರು.

























