ಪುತ್ತೂರು : ರಾತ್ರಿ ಹೊತ್ತು ಕಬಕದಲ್ಲಿ ಪಾರ್ಕ್ ಮಾಡಲಾದ ಸ್ಕೂಟರ್‌ವೊಂದರ ಸೀಟ್‌ನ ತಳಭಾಗದಲ್ಲಿದ್ದ ಸಾವಿರಾರು ರೂ. ನಗದು ಕಳವು ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಧಿತನಾದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಕಬಕ ನಿವಾಸಿ ನಶ್ವಾನ್ ಬಂಧಿತ ಆರೋಪಿ.
ವಿಟ್ಲ ನಿವಾಸಿ ಕೊಳ್ನಾಡು ಗ್ರಾಮದ ಪರ್ತಿಪಾಡಿ ನಿವಾಸಿ ತಿಲಕ್ ಎಂಬವರು ಕಬಕದಲ್ಲಿ ಜೂ.19 ರಂದು ತನ್ನ ಸ್ಕೂಟರ್‌ನ್ನು ಪಾರ್ಕ್ ಮಾಡಿ ಸ್ಕೂಟರ್‌ನ ಸೀಟ್‌ನ ತಳಭಾಗದಲ್ಲಿ 22ಸಾವಿರ ರೂ. ನಗದು ಇರಿಸಿದ್ದರು. ಆದರೆ ಅವರು ಪುನಃ ಬಂದು ನೋಡಿದಾಗ ನಗದು ಕಳವಾಗಿತ್ತು.
ಈ ಕುರಿತು ತಿಲಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿ ನಶ್ವಾನ್ ನನ್ನು ಜೂ. 20 ರಂದು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಅವರು ಕಳವು ಮಾಡಿರುವ ಕುರಿತು ಬಾಯಿ ಬಿಟ್ಟಿದ್ದು, ಜೂ. 21ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

























