ಮಂಗಳೂರು : ಜೆಡಿಎಸ್ ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆ ನಿನ್ನೆ ನಡೆದ ಎಸ್.ಡಿ.ಪಿ. ಐ ಪಕ್ಷದ ಸಂಸ್ಥಾಪನಾ ದಿನಾಚರಣೆ ಸಂಬಂಧಿಸಿದ ನಾಯಕರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐಗೆ ಸೇರ್ಪಡೆಗೊಂಡಿದ್ದು, ಇಂದು ಎಸ್.ಡಿ.ಪಿ.ಐ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಈ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ 15ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಕಾರ್ಯಕ್ರಮಗಳನ್ನು ನೋಡಿ ನನಗೆ ಖುಷಿಯಾದ ಕಾರಣ ಆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದು ನಿಜ.
ಆದರೇ ನನ್ನ ಈ ನಿರ್ಧಾರದ ಬಗ್ಗೆ ನನ್ನ ಮನೆಯವರಿಗೆ, ಕುಟುಂಬಸ್ಥರಿಗೆ ತಿಳಿದಾಗ ಅದಕ್ಕೆ ಅವರೆಲ್ಲರೂ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಎಸ್.ಡಿ.ಪಿ.ಐ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸುಮತಿ ಹೆಗ್ಡೆ ರವರ ಪತ್ರಿಕಾ ಹೇಳಿಕೆ




























