ಪುತ್ತೂರು : ವ್ಯಕ್ತಿಯೋರ್ವ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿದ್ದು, ಪೊಲೀಸರು ಸೂಕ್ತ ತನಿಖೆ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ಮಹಿಳೆ ದೂರು ನೀಡಿದ್ದು, ಕಾವೇರಿಕಟ್ಟೆ ಮಣಿಕಂಠ ಗ್ಯಾಸ್ ಏಜೆನ್ಸಿ ಬಳಿಯ ದಿ.ಹಸೈನಾರ್ ಅವರ ಪುತ್ರನಾಗಿರುವ ರಫೀಕ್ ಕೆ.ಟಿ ರನ್ನು ಕೆಲ ವರುಷಗಳ ಹಿಂದೆ ಮದುವೆಯಾಗಿದ್ದು, ಅವರು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
2018ರ ಫೆ.1ಕ್ಕೆ ನನ್ನ ಮದುವೆ ಅವರೊಂದಿಗೆ ಆಗಿದ್ದು, 3 ವರ್ಷದ ಗಂಡು ಮಗು ಕೂಡಾ ಇದೆ. ಮದುವೆಯಾದಾಗಿನಿಂದ ಗಂಡ ನನ್ನನ್ನು ಸಂಶಯದಿಂದ ನೋಡುತ್ತಿದ್ದು, ಬೈದು, ಹೊಡೆದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಹಿಂದೆ ಒಂದು ಸಲ ಮನೆಯಲ್ಲಿದ್ದ ಕಪಾಟಿಗೆ ನನ್ನ ತಲೆಯನ್ನು ಗುದ್ದಿದ್ದು ಮತ್ತೊಂದು ಸಲ ಇಸ್ತ್ರಿಪೆಟ್ಟಿಗೆಯನ್ನು ಬಿಸಿ ಮಾಡಿ ನನ್ನ ಎಡ ಕೈಗಿಟ್ಟಿದ್ದರಿಂದ ಕೈ ಬೆಂದು ಹೋಗಿತ್ತು. ಪತಿ ನೀಡುತ್ತಿರುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ ನಾನು ಜೂ.17 ರಂದು ಸಹೋದರನಲ್ಲಿ ವಿಚಾರ ತಿಳಿಸಿ ತಾಯಿ ಮನೆಗೆ ಬಂದು ವಾಸವಿರುವುದಾಗಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಮಹಿಳಾ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದು, ಅದರಂತೆ ಆರೋಪಿ ವಿರುದ್ಧ ಕಲಂ 498(ಎ), 324, 504, 506 ಐಪಿಸಿಯಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























