ಉಡುಪಿ : ಜಿಲ್ಲೆಯ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ವಿರುದ್ಧ ಕೋಟ್ಯಾಂತರ ರೂ. ವಂಚನೆ ಆರೋಪ ಕೇಳಿ ಬಂದಿದೆ.
ಏನಿದು ಆರೋಪ.!??
ಉಡುಪಿ ನಗರದ ಶ್ರೀ ಲಕ್ಷ್ಮೀ ಇನ್ಪ್ರಾಸ್ಟ್ರಕ್ಚರ್‌ನ ಮಾಲೀಕ, ಅಮೃತ್ ಶೆಣೈ ‘ವೈಜರ್’ ಹೆಸರಿನ ಅಪಾರ್ಟ್ ಮೆಂಟ್ ಕಟ್ಟಿಸುತ್ತಿದ್ದು, ಈ ಕಟ್ಟಡದ ನಿರ್ಮಾಣ ಹಂತದಲ್ಲೇ ಹಲವರು ಲಕ್ಷಾಂತರ ರೂಪಾಯಿ ನೀಡಿ ಬುಕ್ ಮಾಡಿದ್ದರು. ಅಂದಾಜು 40 ಕ್ಕೂ ಹೆಚ್ಚು ಜನರಿಂದ ಆರೋಪಿ ಕಂತುಗಳಲ್ಲಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರಂತೆ. ಆದರೆ ಫ್ಲ್ಯಾಟ್ ಕಾಮಗಾರಿಯನ್ನೂ ಮುಗಿಸದೆ, ನೋಂದಣಿಯೂ ಮಾಡಿಸಿಕೊಟ್ಟಿಲ್ಲ. ಇಷ್ಟೇ ಅಲ್ಲದೇ ಇಬ್ಬಿಬ್ಬರಿಗೆ ಒಂದೇ ಫ್ಲ್ಯಾಟ್ನ್ನು ಮಾರಿದ್ದಾಗಿ ವಂಚನೆಗೊಳಗಾದವರು ದೂರಿದ್ದಾರೆ.
ಅಮೃತ್ ಶೆಣೈ ವಿರುದ್ಧ ನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಅಪಾರ್ಟ್ಮೆಂಟ್ ಕೊಡ್ತೀವಿ ಎಂದು ನಮ್ಮ ಬಳಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. 8 ವರ್ಷದ ಹಿಂದೆಯೇ ದುಡ್ಡನ್ನು ಪಡೆದು, ಇನ್ನೂ ನೋಂದಣಿ ಮಾಡಿಸಿಕೊಟ್ಟಿಲ್ಲ. ದುಡ್ಡು ಕೂಡ ವಾಪಸ್ ಕೊಟ್ಟಿಲ್ಲ ಎಂದು ವಂಚನೆಗೊಳಗಾದ ಗಿರೀಶ್ ಐತಾಳ್ ಆರೋಪಿಸಿದ್ದಾರೆ.


























