ಬೆಂಗಳೂರು: ಗ್ಯಾರಂಟಿ ಖುಷಿ ನಡುವೆ ಬೆಂಗಳೂರು ಮಂದಿಗೆ ಬೆಲೆ ಏರಿಕೆ ಶಾಕ್ ಆಗಿದೆ. ಒಂದೇ ವಾರದಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು ಆಗಿದ್ದು, ಮನೆಯ ಯಜಮಾನರು ಕಂಗಾಲ್ ಆಗಿದ್ದಾರೆ.
ಅಂದಹಾಗೆ ಒಂದೇ ವಾರದಲ್ಲಿ ಟೊಮ್ಯಾಟೋ ರೇಟ್ ಮೂರು ಪಟ್ಟು ಹೆಚ್ಚಳವಾಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನೂರರ ಸನಿಹಕ್ಕೆ ಟೊಮ್ಯಾಟೋ ದರ ತಲುಪಿದೆ. ಇಂದು ಒಂದು ಕೆ.ಜಿಗೆ 80 ರಿಂದ 90 ರೂಪಾಯಿ ಇದೆ. ಕಳೆದ ವಾರ ಒಂದು ಕೆ.ಜಿಗೆ ಕೇವಲ 20 ರಿಂದ 30 ರೂಪಾಯಿ ಇತ್ತು.
ಇತರೆ ರಾಜ್ಯಗಳಲ್ಲಿ ಭಾರೀ ಮಳೆ ಹಿನ್ನೆಲೆ ರಾಜ್ಯದ ಟೊಮ್ಯಾಟೋಗೆ ಡಿಮ್ಯಾಂಡ್ ಬಂದಿದೆ. ರಾಜ್ಯದ ಟೊಮ್ಯಾಟೋ ಬೇರೆ ರಾಜ್ಯಗಳಿಗೆ ರಫ್ತು ಆಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದ ಟೊಮ್ಯಾಟೋ ಬಾಂಗ್ಲಾಕ್ಕೆ ರಫ್ತಾಗಿದೆ.
ಒಂದೇ ದಿನ 20ಕ್ಕೂ ಹೆಚ್ಚು ರೂಪಾಯಿ ಏರಿಕೆ ಕಂಡಿದೆ. ಕಳೆದ ವಾರ 20 ರಿಂದ 30 ರೂಪಾಯಿಗೆ ಸೆಲ್ ಆಗುತ್ತಿತ್ತು. ಎರಡು ದಿನದ ಹಿಂದೆ ಕೆಜಿಗೆ 50 ರೂಪಾಯಿ ಇತ್ತು. ಇದು ಹೋಲ್ ಸೇಲ್ ದರವಾಗಿದ್ದು, ಕೆಲವು ಅಂಗಡಿಗಳಲ್ಲಿ 130 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಇನ್ನು ಕೆಲವರು ಟೊಮ್ಯಾಟೋ ದರ ಏರಿಕೆ ಹಿನ್ನೆಲೆಯಲ್ಲಿ ಕೊಂಡುಕೊಳ್ಳದೇ ವಾಪಸ್ ಹೋಗ್ತಿದ್ದಾರೆ.
ಬೆಲೆ ಏರಿಕೆಯಾಗಿರುವ ದಿನಸಿಗಳ ವಿವರ
- ಅಕ್ಕಿ: ಹಿಂದಿನ ದರ 40 ರೂ. ಈಗ 50 ರೂ
- ತೂರ್ ದಾಲ್: ಹಿಂದಿನ ದರ 96 ರೂ. ಈಗ 115 ರೂ
- ಉದ್ದಿನಬೇಳೆ: ಹಿಂದಿನ ದರ 95 ರೂ. ಈಗ 128 ರೂ
- ಮಸೂರ್‌ದಾಲ್: ಹಿಂದಿನ ದರ 74 ರೂ. ಈಗ 85 ರೂ
- ಹೆಸರು ಬೇಳೆ: ಹಿಂದಿನ ದರ 95 ರೂ. ಈಗ 105 ರೂ
- ಜೀರಾ: ಹಿಂದಿನ ದರ 350 ರೂ. ಇಂದಿನ ದರ 750 ರೂ
- ಅರಿಶಿಣ ಪುಡಿ: ಹಿಂದಿನ ದರ 126 ರೂ. ಇಂದಿನ ದರ 307 ರೂ.
- ಚಿಲ್ಲಿ ಪೌಡರ್: ಹಿಂದಿನ ದರ 186 ರೂ. ಈಗ 425 ರೂ
- ದನಿಯಾ ಪೌಡರ್: ಹಿಂದಿನ ದರ 150 ರೂ. ಈಗ 218 ರೂ
- ಪೆಪ್ಪರ್: ಹಿಂದಿನ ದರ 380 ರೂ, ಈಗ 520 ರೂ
- ಬ್ಯಾಡಗಿ ಮೆಣಸು: ಹಿಂದಿನ ದರ 330 ರೂ, ಈಗ 850 ರೂ ಇದೆ.