ವಿಟ್ಲ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ನೀಡುವಲ್ಲಿ ಆಗುತ್ತಿರುವ ವಿಳಂಬ, ಕಟ್ಟಡ ಪರವಾನಿಗೆ, ಇ-ಖಾತಾ ನೀಡುವಲ್ಲಿ ಆಗುತ್ತಿರುವ ವಿಳಂಬ, ಮಳೆಗಾಲ ಆರಂಭವಾದರೂ ಆಗದ ಚರಂಡಿಗಳ ಹೂಳೆತ್ತುವಿಕೆಯ ಕೆಲಸ, ವಸತಿ ಯೋಜನೆಗಳಿಗೆ ತೋರಿದ ನಿರ್ಲಕ್ಷ್ಯ, ಬೀದಿದೀಪಗಳ ನಿರ್ವಹಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಜನಸಾಮಾನ್ಯರಿಗೆ ಅಧಿಕಾರಿಗಳು ನೀಡುವ ಮಾಹಿತಿ ಕೊರತೆ ಮುಂತಾದ ಸಮಸ್ಯೆಗಳನ್ನು ಆದಷ್ಟೂ ಬೇಗ ನಿವಾರಣೆ ಮಾಡುವ ಕುರಿತು ಪುತ್ತಿಲ ಪರಿವಾರ ವಿಟ್ಲ ನಗರ ಸಮಿತಿಯು ಇಂದು ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ನಗರ ಸಮಿತಿ ಅಧ್ಯಕ್ಷ ಮೋಹನ್ ಸೇರಾಜೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಮಾಡ, ಕಾರ್ಯದರ್ಶಿ ಶರತ್ ಎನ್.ಎಸ್, ಕ್ಷೇತ್ರ ಉಪಾಧ್ಯಕ್ಷರುಗಳಾದ ರಘುರಾಮ ರೈ, ಅನಂತ ಪ್ರಸಾದ್, ಪಟ್ಟಣ ಪಂಚಾಯತ್ ಮಾಜಿ ಸದಸ್ಯರುಗಳಾದ ಶ್ರೀಕೃಷ್ಣ ವಿಟ್ಲ, ಸಂಧ್ಯಾ ಮೋಹನ್ ಉಪಸ್ಥಿತರಿದ್ದರು.



























