ಕಡಬ : ಸವಣೂರು ಗ್ರಾಮದ ಬರೆಮೇಲು ನಿವಾಸಿ ಮೋನಪ್ಪ ನಾಯ್ಕ್ (45) ರವರು ‘Diagnosed case of non hodgkins lymphoma (follicular lymphoma) ಶರೀರದಲ್ಲಿ ರಕ್ತದ ಉತ್ಪತಿ ಕುಂಠಿತ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಲಕ್ಷಾಂತರ ರೂ. ಅವಶ್ಯಕತೆ ಇದ್ದು ಬಡಕುಟುಂಬಕ್ಕೆ ದಾನಿಗಳ ನೆರವು ಬೇಕಾಗಿದೆ.

ಮೋನಪ್ಪ ನಾಯ್ಕ್ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರ ಕೆಲಸದಿಂದ ಬರುವ ಆದಯವೇ ಕುಟುಂಬದ ಜೀವನಕ್ಕೆ ಬೆನ್ನುಲುಬಾಗಿತ್ತು. ಆದರೇ ಮೋನಪ್ಪ ರವರ ಅನಾರೋಗ್ಯದಿಂದಿದ್ದು, ಇದೀಗ ಅವರ ಪತ್ನಿ ಕೆಲಸಕ್ಕೆ ತೆರಳುತ್ತಿರುವುದರಿಂದ ಬರುವ ಆದಾಯದಿಂದ ಕುಟುಂಬ ಜೀವನ ಸಾಗಿಸುತ್ತಿದೆ.
ಮೋನಪ್ಪ ರವರು ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ‘planned for autologous stem ceill transplant’ ಮಾಡಬೇಕಾಗಿದ್ದು, ಸದರಿ ಚಿಕಿತ್ಸೆಗೆ 10-12 ಲಕ್ಷ ರೂ. ಅವಶ್ಯಕತೆ ಇರುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.

ಬಡ ಕುಟುಂಬ ಸವಣೂರು ಯುವಕ ಮಂಡಲದ ಬಳಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದು, ಅವರು ಸಾಮಾಜಿಕ ಜಾಲತಾಣಗಳ ಮೂಲಕ ನೆರವಿಗಾಗಿ ದಾನಿಗಳು ಸಹಾಯಹಸ್ತ ನೀಡುವಂತೆ ಕೇಳಿಕೊಂಡಿದ್ದಾರೆ.

Monappa naika
Ac number : 71400100015430
Ifsc code : BABR0VJBELL
Branch : bellare
Google pay : 94802 30215
Monappa Savanoor

























