ಪುತ್ತೂರು : ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆಯುವ 25ನೇ ವರುಷದ ಶ್ರೀ ಕೃಷ್ಣ ಲೋಕ ಕಾರ್ಯಕ್ರಮದ ನೂತನ ಸಮಿತಿ ರಚನಾ ಸಭೆಯು
ವಿವೇಕಾನಂದ ಶಿಶು ಮಂದಿರದಲ್ಲಿ ನಡೆಯಿತು.

ಈ ವರ್ಷದ ಸಮಿತಿಯ ಗೌರವಾಧ್ಯಕ್ಷರಾಗಿ ರಾಜಿ ಬಲರಾಮ್, ಅಧ್ಯಕ್ಷರಾಗಿ ಯಸ್ ದಾಮೋದರ ಪಾಟಾಳಿ, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ರೈ, ಜೊತೆ ಕಾರ್ಯದರ್ಶಿಯಾಗಿ ಸುಪ್ರಿಯ ಭಟ್, ಕೋಶಾಧಿಕಾರಿಯಾಗಿ ಈಶ್ವರ್ ಮುರಳಿ ಭಟ್, ಗೌರವ ಸಲಹೆಗಾರರಾಗಿ ಉಪೇಂದ್ರ ಬಲ್ಯಾಯ ರನ್ನು ಆಯ್ಕೆ ಮಾಡಲಾಯಿತು.
ಶಿಶು ಮಂದಿರದ ಅಧ್ಯಕ್ಷರಾದ ರಾಜಗೋಪಾಲ್ ಭಟ್ ಕೋಶಾಧಿಕಾರಿ ಚಂದ್ರಪ್ರಭಾ ಕಾರ್ಯದರ್ಶಿ ಅಕ್ಷಯ್ ಕುಮಾರ್, ಪೂರ್ವಾದ್ಯಕ್ಷರಾದ ಅಶೋಕ್ ಕುಂಬ್ಳೆ, ಸದಸ್ಯರಾದ ಅಶೋಕ್ ಬಲ್ನಾಡ್, ಮಲ್ಲೇಶ್, ಸ್ಪರ್ಧಾ ಕಾರ್ಯಕ್ರಮದ ಸಂಚಾಲಕರಾದ ಶ್ರೀಕಾಂತ್ ಮಾಸ್ಟರ್ , ಮಕ್ಕಳ ಪಾಲಕರು ಹಾಗೂ ಮಾತಾಜಿ ಯವರು ಉಪಸ್ಥಿತರಿದ್ದರು.

























