ಪುತ್ತೂರು : ಗ್ರಾಮಾಂತರ ಠಾಣೆಯಲ್ಲಿ ಕಲಂ 392,201 ಜೊತೆಗೆ 34 ಐ ಪಿ ಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆ ಎಡನಾಡ್ ಗ್ರಾಮ ಜಮಾಲ್ ವಾಸ-ರಾಜೀವ್ ಗಾಂಧಿ ನಗರ ನಿವಾಸಿ ಅಬ್ದುಲ್ ನಿಸಾರ್ (21) ಬಂಧಿತ ಆರೋಪಿ.

ಮೇಲಾಧಿಕಾರಿಗಳ ಆದೇಶದಂತೆ ಕೇರಳದ ರಾಜ್ಯ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ಠಾಣಾ ಸಿಬ್ಬಂದಿಗಳಾದ ಹೆಚ್ ಸಿ ಪ್ರವೀಣ್ ರೈ, ಹೆಚ್ ಸಿ ಮಧು ಕೆ ಎನ್ ಮತ್ತು ಪಿಸಿ ಚೋಳಪ್ಪ ಸಂಶಿ ರವರುಗಳು ವಶಕ್ಕೆ ಪಡೆದು ACJM and JMFC ನ್ಯಾಯಾಲಯ ಪುತ್ತೂರು ರವರ ಮುಂದೆ ಹಾಜರು ಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

























