ವಿಟ್ಲ : ಕರಾವಳಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಗುಡ್ಡಗಳು ಕುಸಿದು ಬೀಳುತ್ತಿವೆ. ರಸ್ತೆ ಬದಿಯ ಗುಡ್ಡವೊಂದು ಕುಸಿದು ವಾಹನ ಸವಾರರಿಗೆ ಸಂಕಷ್ಟ ಉಂಟಾಗಿರುವ ಘಟನೆ ಮಂಗಳೂರು-ವಿಟ್ಲ ರಸ್ತೆಯ ವೀರಕಂಭ ಬಳಿ ನಡೆದಿದೆ.

ವೀರಕಂಭ ಮಜಿ ಶಾಲಾ ಬಳಿ ಗುಡ್ಡವೊಂದು ಕುಸಿದು ರಸ್ತೆಗೆ ಬಿದ್ದಿದ್ದು, ವಾಹನ ಸವಾರರು, ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





























