ಪುತ್ತೂರು : ಭಾರೀ ಮಳೆಗೆ ಮರ ಬಿದ್ದು ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯನ್ನು ಶಾಸಕ ಅಶೋಕ್ ರೈ ಅಭಿಮಾನಿ ಬಳಗದವರು 24 ಗಂಟೆಯೊಳಗೆ ದುರಸ್ಥಿ ಮಾಡಿಸಿದ್ದಾರೆ.

ಮುಂಡೂರು ಗ್ರಾಮದ ಸಿಂಹವನ ನಿವಾಸಿ ಮಲ್ಲು ಎಂಬವರ ಮನೆಯ ಅಂಗಳದಲ್ಲಿದ್ದ ಭಾರೀ ಗಾತ್ರದ ಮರವೊಂದು ಮುರಿದು ಬಿದ್ದು ಮಲ್ಲು ಅವರ ಸಿಮೆಂಟ್ ಶೀಟ್ ಆಳವಡಿಸಲಾಗಿದ್ದ ಮನೆ ಸಂಪೂರ್ಣ ಜಖಂಗೊಂಡಿತ್ತು. ಮನೆ ವಾಸ್ತವ್ಯಕ್ಕೆ ಯೋಗ್ಯವಾಗಿರಲಿಲ್ಲ. ರಾತ್ರೋ ರಾತ್ರಿ ಮರವನ್ನು ಅಭಿಮಾನಿ ಬಳಗದವರು ತೆರವು ಮಾಡಿದ ಬಳಿಕ ಮನೆಯನ್ನು ದುರಸ್ಥಿಗೊಳಿಸಿದರು.

ಘಟನಾ ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಶಿವಶಂಕರ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಳೆಗೆ ಮನೆ ಹಾನಿಯಾದರೆ ತಕ್ಷಣ ಮನೆಯನ್ನು ದುರಸ್ಥಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದ್ದು, ಅದರಂತೆ ಅಭಿಮಾನಿ ಬಳಗದವರು ಮನೆಯನ್ನು ದುರಸ್ಥಿಗೊಳಿಸಿದ್ದಾರೆ.

ಸಿಂಹವನ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ದೇವರಾಜ, ಆನಂದ ಸಿಂಹವನ, ಶಿವು ಸಿಂಹವನ, ರವಿ, ಪುಟ್ಟಪ್ಪ ನಾಯ್ಕ, ಸುಂದರ ನಾಯ್ಕ ಮತ್ತಿತರರು ಮನೆ ದುರಸ್ಥಿ ಮಾಡುವಲ್ಲಿ ನೆರವಾದರು.



























