ಪುತ್ತೂರು : ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಳ್ತಿಗೆ ಪಂಬಾರು ಸಿಆರ್ ಸಿ ಕಾಲೋನಿ ನಿವಾಸಿ ವಿಜಯ (ಮಣಿವಣ್ಣನ್) ಬಂಧಿತ ಆರೋಪಿ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಹೆಚ್.ಸಿ ಪ್ರವೀಣ್ ರೈ, ಹೆಚ್.ಸಿ ಮಧು ಕೆ.ಎನ್ ಮತ್ತು ಪಿಸಿ ಚೋಳಪ್ಪ ಸಂಶಿ ಎಂಬುವವರು ದಸ್ತಗಿರಿ ಮಾಡಿ ಐದನೇ ಹೆಚ್ಚುವರಿ ಜಿಲ್ಲಾ, ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಸದ್ರಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


























