ವಿಟ್ಲ : ಭಾರೀ ಮಳೆಗೆ ಮರವೊಂದು ರಸ್ತೆಗೆ ಬಿದ್ದು, ಸಂಚಾರದಲ್ಲಿ ಅಸ್ತವ್ಯಸ್ತವಾದ ಘಟನೆ ವೀರಕಂಭ ಗ್ರಾಮದ ತೆಕ್ಕಿಪಾಪು ಎಂಬಲ್ಲಿ ನಡೆದಿದೆ.

ತೆಕ್ಕಿಪಾಪು ಎಂಬಲ್ಲಿ ರಸ್ತೆಗೆ ಮರ ಬಿದ್ದು, ಕಲ್ಲಡ್ಕ-ವಿಟ್ಲ ರಸ್ತೆ ಬಂದ್ ಆಗಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸ್ಥಳೀಯರು ಮರ ತೆರವು ಕಾರ್ಯ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


























