ವಿಟ್ಲ : ವ್ಯಕ್ತಿಯೊಬ್ಬರು ಕಾಲು ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.
ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ಕೇಶವ ನಾಯ್ಕ ಎಂ (51) ಮೃತರು.

ಕೇಶವ ನಾಯ್ಕ ಅವರು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿರುವ ತನ್ನ ಬಾಡಿಗೆ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಬಳಿಯಿರುವ ನೀರು ಹರಿಯುವ ಸಾರ್ವಜನಿಕ ಕಣಿಗೆ ಹಾಕಿರುವ ಕಾಲು ಸಂಕ ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























