ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಫಾದರ್
ಮುಲ್ಲರ್ ಸಂಸ್ಥೆಯ ನಿರ್ದೇಶಕರಾಗಿದ್ದು,
ಹೋಮಿಯೋಪತಿ ಕಾಲೇಜು ಹಾಗೂ ನರ್ಸಿಂಗ್
ಕಾಲೇಜು ಸ್ಥಾಪನೆಗೆ ಶ್ರಮಿಸಿದ್ದ ವಂ. ಪೀಟರ್
ನೊರೊನ್ಹಾ(85) ಇಂದು ಬೆಳಗ್ಗೆ ಹೃದಯಾಘಾತದಿಂದ
ನಿಧನರಾದರು.
ಅವರು 1961ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ
ಧರ್ಮಗುರುವಾಗಿ ಅಭಿಷಿಕ್ತರಾಗಿ, ನಂತರ
ಬಜಪೆ ಮತ್ತು ಬಿಜೈ ಇಗರ್ಜಿಗಳಲ್ಲಿ ಸಹಾಯಕ
ಧರ್ಮಗುರುವಾಗಿ ಹಾಗೂ ಕಾಟಿಪಳ್ಳ, ಉಡುಪಿ,
ಮೊಡಂಕಾಪು-ಬಂಟ್ವಾಳ ಮತ್ತು ಬೆಂದೂರ್
ಇಗರ್ಜಿಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ
ನಿರ್ದೇಶಕರಾಗಿದ್ದ ಅವರು, ಹೋಮಿಯೋಪತಿ
ಕಾಲೇಜು- ಆಸ್ಪತ್ರೆ ಹಾಗೂ ಕರ್ನಾಟಕದ ಮೊದಲ
ನರ್ಸಿಂಗ್ ಕಾಲೇಜನ್ನು ಸ್ಥಾಪಿಸಲು ಶ್ರಮಿಸಿದ್ದರು.
ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್
ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ.