ವಿಟ್ಲ : ಅಳಿಕೆ ಗ್ರಾಮದ ಎರುಂಬು ದಿ. ಬಾಬು ರವರ ಅಕಾಲಿಕ ಮರಣ, ಅವರ ಪುತ್ರಿಯ ಅಸೌಖ್ಯತೆ, ಅವರ ಮನೆಯ ಸ್ಥಿತಿಗತಿಯ ಮೇಲೆ, ಅನುಕಂಪ ತೋರಿ ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಸರ್ವ ಸದಸ್ಯರು ಸೇರಿ ಸಂಗ್ರಹಿಸಿದ 31,501 ರೂ. ಅನ್ನು ಮೃತರ ಪತ್ನಿ ಕಮಲ ರವರ ಕೈಯಲ್ಲಿ ನೀಡಲಾಯಿತು.
ಈ ಸಂಗ್ರಹ ಮಿತ್ರ ವೃಂದದ ಸರ್ವರ ಸ್ವಯಂಪ್ರೇರಿತ ದೇಣಿಗೆಯಾಗಿ ಆ ಮನೆಯವರ ಸಂಕಷ್ಟಕ್ಕೆ ನೇರವಾಗಲಿದೆ. ಸರ್ವ ಸದಸ್ಯರು ಜೊತೆ ಸೇರಿ ಮೃತರ ಮನೆಗೆ ಭೇಟಿಯಿತ್ತು ಪತ್ನಿ ಮಕ್ಕಳನ್ನು ಸಂತೈಸಿ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಸದ್ಗತಿ ಕೋರಿದರು.

ಸಹಾಯ ಹಸ್ತ ಚಾಚಿದ ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ಸರ್ವ ಸದಸ್ಯರಿಗೂ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಮಿತ್ರವೃಂದದ ಈ ಕಾರ್ಯವು ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

























