ಬಂಟ್ವಾಳ : ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಗುರುಕೃಪಾ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದ ಕಛೇರಿಯಲ್ಲಿ ಅದಿತ್ಯವಾರ ನಡೆದ ಸಂಘದ 2023-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಲ್ಲವ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಎಮ್.ತುಂಬೆ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ ಮಿತ್ತಬೈಲು, ಕೋಶಾಧಿಕಾರಿಯಾಗಿ ಆನಂದ ಸಾಲಿಯಾನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಹೇಮಂತ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ರಾಮಚಂದ್ರ ಸುವರ್ಣ ತುಂಬೆ, ಗಿರೀಶ್ ಪೂಜಾರಿ ಬಸ್ರ, ರಾಜೇಶ್ ಸುವರ್ಣ ರಾಜಲಕ್ಮೀ, ಗೋಪಾಲಕೃಷ್ಣ ತುಂಬೆ, ವಾಸು ಪೂಜಾರಿ ಲೊರೆಟ್ಟೋ, ಬೇಬಿ ಕುಂದರ್, ಶೈಲಜಾ ರಾಜೇಶ್, ಗಣೇಶ್ ಪೂಂಜರೆಕೋಡಿ, ಸತೀಶ್ ಬಿ, ತಿಮ್ಮಪ್ಪ ಪೂಜಾರಿ, ಉಮೇಶ್ ಸುವರ್ಣ ತುಂಬೆ, ಜಯಪ್ರಕಾಶ್ ಜೆ.ಎಸ್, ಪ್ರಭಾವತಿ ತುಂಬೆ, ವಿರೇಂದ್ರ ಅಮೀನ್, ಮೋನಪ್ಪ ಮಜಿ, ಪ್ರಶಾಂತ್ ಕೋಟ್ಯಾನ್, ಗೋಪಾಲ ಪೂಜಾರಿ, ಶಂಕರ ಕಾಯರ್‌ಮಾರ್ ಆಯ್ಕೆಯಾದರು.

























