ಪುತ್ತೂರು : ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪುರುಷೋತ್ತಮ್ ಪ್ರಭು ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.

ಆರ್ಯಾಪು ಗ್ರಾಮ ಪಂಚಾಯತಿಯ ಆರ್ಯಾಪು ಎರಡನೇ ವಾರ್ಡ್ನ (ಆರ್ಯಾಪು 11) ಸದಸ್ಯರಾಗಿದ್ದ ನಿವೃತ್ತ ಎಸ್ಐ ರುಕ್ಮಯ್ಯ ಮೂಲ್ಯ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ಹಿನ್ನೆಲೆ ಉಪಚುನಾವಣೆ ನಡೆಯಲಿದೆ.


























