ಪುತ್ತೂರು : ಪರ್ಪುಂಜ ಬಂಡಿವಾಳ ನಿವಾಸಿ ಗಂಗಾಧರ ಪೂಜಾರಿಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತರ ಪತ್ನಿ ಕುಸುಮರಿಗೆ ಪುತ್ತಿಲ ಪರಿವಾರದ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು.
ಈ ಸಂದರ್ಭ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಕಾರ್ಯದರ್ಶಿ ಸುದೀರ್ ರೈ ಕಂಪ, ಒಳಮೊಗ್ರು ಅಧ್ಯಕ್ಷರಾದ ರಿತೇಶ್ , ಕಾರ್ಯಾಧ್ಯಕ್ಷರಾದ ಶರತ್, ಶನ್ಮಿತ್, ಜಯಂತ್ ಬರಮೇಲು, ಮೋಹನ್ ರೈ, ಚಿದಾನಂದ ರೈ ಕಲ್ಲಡ್ಕ , ಗಣೇಶ್, ಸಚಿನ್ ಉಪಸ್ಥಿತರಿದ್ದರು.


























