ವಿಟ್ಲ : ರಸ್ತೆಗೆ ವಾಲಿ ನಿಂತಿದ್ದ ಮರಕ್ಕೆ ಆಟೋ ರಿಕ್ಷಾ ಸಿಕ್ಕಿಹಾಕಿಕೊಂಡ ಘಟನೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥದ ಬೀದಿಯಲ್ಲಿ ನಡೆದಿದೆ.

ಅಳಿಕೆ ನಿವಾಸಿ ಮಧುಕರ ಎಂಬವರು ತನ್ನ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಈ ಅಪಾಯಕಾರಿ ಮರದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನೆಯಲ್ಲಿ ಆಟೋ ರಿಕ್ಷಾಗೆ ಹಾನಿಯಾಗಿದೆ.


























