ಪುತ್ತೂರು : ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನ ಮೂಲಕ ಪರ್ಲಡ್ಕ ಅಂಗನವಾಡಿ ಗೇಟ್ ಬಳಿ ರಾಶಿ ಹಾಕಿದ್ದ ಮಣ್ಣು ಸಮತಟ್ಟುಗೊಳಿಸಲಾಯಿತು.

ಅಂಗನವಾಡಿ ಗೇಟ್ ಬಳಿ ಮಣ್ಣು ರಾಶಿ ಹಾಕಿ ತಿಂಗಳು ಕಳೆದರೂ ಸಂಬಂಧಪಟ್ಟ ಇಲಾಖೆಗಳಿಗೆ ನಗರಸಭೆಗೆ ತಿಳಿಸಿದರೂ ತೆರವುಗೊಳಿಸದ ಹಿನ್ನೆಲೆ ಅಂಗನವಾಡಿ ವಿದ್ಯಾರ್ಥಿಗಳಿಗೆ ನಡೆಯಲಾರದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸುಧೀರ್ ಆಚಾರ್ಯ ಪ್ರವೀಣ್ ಭಂಡಾರಿ , ದೀಕ್ಷಿತ್ , ಅನ್ವಿತ್ ರೈ, ಅನಿಲ್ ತೆಂಕಿಲ, ಉಮೇಶ್ ಗೌಡ, ಸುದೀರ್ ರೈ, ಮನೀಷ್ , ಸನ್ಮಿತ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.


























