ಮೈಸೂರು : ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತ ನಡೆದ ವೇಳೆ ಅದೇ ರಸ್ತೆಯಲ್ಲಿ ಪುತ್ತೂರು ಬಪ್ಪಳಿಗೆಯ ಶಾಫಿ ಗಡಪ್ಪಿಲ ಬಪ್ಪಳಿಗೆ, ಅಮ್ಮಿ ಗಡಪ್ಪಿಲ ಬಪ್ಪಳಿಗೆ, ಹುರೈಸ್ ಬಪ್ಪಳಿಗೆ, ಆಶಿಕ್ ಬಪ್ಪಳಿಗೆ ಮೊದಲಾದವರು ತೆರಳುತ್ತಿದ್ದು, ಘಟನೆ ನೋಡಿ ತಮ್ಮ ಕಾರನ್ನು ನಿಲ್ಲಿಸಿ ಕೂಡಲೇ ಕಾರಿನ ಗಾಜು ಡೋರನ್ನು ಸರಳಿನಿಂದ ತೆಗೆದು ಮೂರು ಮೃತದೇಹಗಳನ್ನು ಹೊರ ತೆಗೆಯಲು ಸಹಕರಿಸಿದ್ದಾರೆ.
ಮಾನವೀಯತೆ ಮೆರೆದ ಯುವಕರ ತಂಡ

ಗಂಭೀರ ಸ್ಥಿತಿಯಲ್ಲಿದ್ದ ಉಳಿದ ಐವರನ್ನು ಹೊರ ತೆಗೆದು ತಕ್ಷಣ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಯುವಕರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆಯಲ್ಲಿ ಮುದಾಸೀರ್, ಮುಜಾಯಿದ್, ಅಹ್ಮದ್ ಪಾಷಾ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























