ವಿಟ್ಲ : ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜತ್ತಪ್ಪ ಗೌಡ ನಾಯ್ತೊಟ್ಟು ( 83 ) ಅಸೌಖ್ಯದಿಂದ ನಿಧನರಾದರು.
ವಿಟ್ಲ ಗ್ರಾಮ ಪಂಚಾಯತ್ ಗೆ 2 ಬಾರಿ ಬಿಜೆಪಿ ಪಕ್ಷದಿಂದ ಸದಸ್ಯರಾಗಿದ್ದ ಇವರು ಒಮ್ಮೆ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬೊಳಂತಿಮೊಗರು ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಬೊಳಂತಿಮೊಗರುವಿಗೆ ಸರ್ಕಾರಿ ಹೈಸ್ಕೂಲ್ ಬರುವಲ್ಲಿ ತುಂಬಾ ಶ್ರಮವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ ಹಾಗೂ ನಿವೃತ್ತ ಸೈನಿಕ ಧನಂಜಯ ನಾಯ್ತೊಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಕರುಣಾಕರ ನಾಯ್ತೊಟ್ಟು ಸಹಿತ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

























