ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವುದರಿಂದ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಸ್ನಾನಘಟ್ಟ ಶನಿವಾರ ಮುಳುಗಡೆಗೊಂಡಿದೆ.

ಶುಕ್ರವಾರ ರಾತ್ರಿಯಿಂದಲೇ ಬಾರೀ ಮಳೆಯಾಗುತ್ತಿದೆ. ಘಟ್ಟ ಪ್ರದೇಶದಲ್ಲೂ ಬಾರೀ ಮಳೆಯಾಗುತ್ತಿರುವುದರಿಂದ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದೆ. ಕುಮಾರಧಾರ ಸ್ನಾನ ಘಟ್ಟ ಹಾಗೂ ಕಿಂಡಿಅಣೆಕಟ್ಟು ಮುಳುಗಡೆಯಾಗಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಭಕ್ತಾಧಿಗಳಿಗೆ ನೀರಿಗಳಿಯದಂತೆ ಸೂಚನೆ ನೀಡಲಾಗಿದೆ. ನದಿ ದಡದಲ್ಲಿ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಎಚ್ಚರಿಕಾ ಸಂದೇಶ ನೀಡಲಾಗುತ್ತಿದೆ.

ಸುಬ್ರಹ್ಮಣ್ಯ ಪರಿಸದಲ್ಲಿ ಶನಿವಾರ ದಿನವಿಡೀ ಭಾರೀ ಮಳೆಯಾಗಿದೆ. ಕುಮಾರಧಾರ ಸೇರಿದಂತೆ ಸಣ್ಣ ಪುಟ್ಟ ತೋಡು, ಹಳ್ಳಗಳು ಕೂಡ ತುಂಬಿ ಹರಿಯುತ್ತಿದೆ.

























