ಬಂಟ್ವಾಳ : ಪೊಲೀಸರ ವಾಹನ ತಪಾಸಣೆ ವೇಳೆ ಕಳವು ಮಾಡಿದ ಬೈಕ್ ಪತ್ತೆಯಾದ ಘಟನೆ ಮೆಲ್ಕಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ಡ್ಯೂಕ್ ಕಂಪೆನಿಗೆ ಸೇರಿದ ಬೈಕ್ ಇದಾಗಿದ್ದು, ಸದ್ಯ ಪೋಲೀಸರ ವಶದಲ್ಲಿದೆ.

ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಫರಂಗಿಪೇಟೆ ಎಂಬಲ್ಲಿ ಸಂಜೆ ವೇಳೆ ವಾಹನ ತಪಾಸಣಾ ನಡೆಸುತ್ತಿರುವ ವೇಳೆ ಬೆಳಕಿಗೆ ಬಂದಿದೆ.
ಡ್ಯೂಕ್ ಬೈಕಿನಲ್ಲಿ ಬರುತ್ತಿದ್ದ ಸವಾರನನ್ನು ತಪಾಸಣೆ ಮಾಡುವ ಉದ್ದೇಶದಿಂದ ನಿಲ್ಲಿಸಲು ಸೂಚಿಸಿದಾಗ ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಬೈಕ್ ನ್ನು ವಶಪಡಿಸಿಕೊಂಡ ಪೊಲೀಸರು ಬೈಕಿನ ಬಗ್ಗೆ ತಪಾಸಣೆ ನಡೆಸಿದಾಗ ಬೈಕಿನ ಮೂಲ ವಾಹನ ಸಂಖ್ಯೆಯನ್ನು ಬದಲಾಯಿಸಲಾಗಿತ್ತು.
ವಾಹನದ ಇಂಜಿನ್ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇದು ಕಳವಾದ ಬೈಕ್ ಎಂಬುದು ಖಚಿತವಾಯಿತು.
2021ರಲ್ಲಿ ಬೆಂಗಳೂರಿನಲ್ಲಿ ಈ ಬೈಕ್ ಕಳವಾಗಿರುವ ಮಾಹಿತಿ ಪಡೆದ ಪೋಲೀಸರು ಬೆಂಗಳೂರು ಪೊಲೀಸರಿಗೆ ಬೈಕ್ ನ್ನು ಹಸ್ತಾಂತರ ಮಾಡಲಿದ್ದಾರೆ.

























