ವಿಟ್ಲ : ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ. ಚಂದಳಿಕೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಿತಿ ಚಂದಳಿಕೆ ವತಿಯಿಂದ ಸ.19 ರಿಂದ 22ರ ತನಕ ಮಂಗಳ ಮಂಟಪ ಚಂದಳಿಕೆಯಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯೊಂದಿಗೆ ಜರಗಲಿರುವುದು ಇದರ ಬೆಳ್ಳಿಹಬ್ಬ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷರಾದ ಶಂಕರ ಭಟ್ ಬದನಾಜೆ ಅವರ ಮಾರ್ಗದರ್ಶನದಲ್ಲಿ ಕೃಷ್ಣಯ್ಯ ಕೆ ಅರಮನೆ ಗಣೇಶ ಚಂದಳಿಕೆ ಮತ್ತು ಅರ್ಚಕರಾದ ಉದಯೇಶ್ ಕೆದಿಲಾಯ ರವರು ಬಿಡುಗಡೆಗೊಳಿಸಿದರು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾದ ಜಯರಾಮ ಪರನೀರು ನಿಡ್ಯ, ಕ್ಲಬ್ ನ ಅಧ್ಯಕ್ಷರಾದ ಗಂಗಾಧರ ಸಿ, ಕೋಶಾಧಿಕಾರಿ ನರೇಂದ್ರ ಸಿ. ಕಾರ್ಯದರ್ಶಿ ವಿಶ್ವನಾಥ ಅಳಿಕೆ, ದೇವಸ್ಥಾನದ ಜಯರಾಮ ಬಲ್ಲಾಳ್ ಅರಮನೆ ಹಾಗೂ ಪದಾಧಿಕಾರಿಗಳಾದ ಬಿ. ಕೆ. ಬಾಬು, ಕೃಷ್ಣ ಮುದೂರು, ಜಗದೀಶ್ ಗೌಡ ಎಂ. ಲೋಹಿತ್, ಎಂ.ದೀಕ್ಷಿತ್ ಎಂ, ಚೇತನ್ ಕೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


























