ವಿಟ್ಲ : ಒಕ್ಕೆತ್ತೂರಿನಲ್ಲಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವಿಟ್ಲ ಝೋನಲ್ ಸಮಿತಿ ವತಿಯಿಂದ ಸಂಸ್ಕೃತಿಯ ಉಳಿವಿಗಾಗಿ ಮದರಸ ವಿದ್ಯಾರ್ಥಿಗಳ ಬೃಹತ್ ವಿದ್ಯಾರ್ಥಿ ಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ನಿಷೇಧ , ಫೋಕ್ಸೋ ಹಾಗೂ ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ವಿಟ್ಲ ಠಾಣಾ ಸಬ್ ಇನ್ಸ್ಪೆಕ್ಟರ್ ವಿದ್ಯಾ ಕೆ.ಜೆ ಮಾಹಿತಿ ನೀಡಿದರು.

ಮಾದಕ ವಸ್ತು, ಫೋಕ್ಸೋ ಹಾಗೂ ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ವಿದ್ಯಾ ಕೆ.ಜೆ ರವರು ವಿದ್ಯಾರ್ಥಿಗಳಿಗೆ ಸ್ವವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























