ವಿಟ್ಲ : ಪುತ್ತಿಲ ಪರಿವಾರ ಮಾಮೇಶ್ವರ ಘಟಕ ವಿಟ್ಲ ನಗರದ ವತಿಯಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ‘ಕೆಸರ್ಡೊಂಜಿ ದಿನ’ ಎಂಬ ವಿನೂತನ ಕ್ರೀಡಾ ಕಾರ್ಯಕ್ರಮವನ್ನು ಮಚ್ಚಗದ್ದೆಯಲ್ಲಿ ಆಯೋಜಿಸಲಾಗಿತ್ತು.

ನಿಧಿ ಶೋಧ, ಓಟ, ಗೂಟ ಓಟ, ಹಿಮ್ಮುಖ ಓಟ, ಹಾಳೆ ಎಳೆಯುವುದು, ಹಗ್ಗಜಗ್ಗಾಟ, ವಾಲಿಬಾಲ್ ಮುಂತಾದ ಆಟೋಟಗಳು ನಡೆಯಿತು. ಸುಮಾರು 500 ಕ್ಕಿಂತಲೂ ಅಧಿಕ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಅವರು ಅಧ್ಯಕ್ಷತೆಯನ್ನು ವಹಿಸಿ ಹಿಂದೂ ಸಮಾಜ ಇಂದು ಎದುರಿಸುವ ಸಮಸ್ಯೆಗಳನ್ನು ಸರಿಪಡಿಸಲು ಸಶಕ್ತ ಯುವಕರು ಒಗ್ಗೂಡಿದರೆ ಮಾತ್ರ ಸಾಧ್ಯ ಈ ನಿಟ್ಟಿನಲ್ಲಿ ಹಿಂದೂ ಬಾಂಧವರನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಪುತ್ತಿಲ ಪರಿವಾರದ ಸೇವಾ ಚಟುವಟಿಕೆಗಳನ್ನು ವಿವರಿಸಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ, ಖ್ಯಾತ ವೈದ್ಯರಾದ ಅರವಿಂದ್ ವಿಟ್ಲ, ಬೆಂಗಳೂರಿನ ಉದ್ಯಮಿ ರಾಜಶೇಖರ ಕೋಟ್ಯಾನ್ ಶುಭಹಾರೈಸಿದರು. ವೇದಿಕೆಯಲ್ಲಿ ಪುತ್ತಿಲ ಪರಿವಾರದ ಪುತ್ತೂರು ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಡೀಕಯ್ಯ ಸುರುಳಿಮೂಲೆ, ಪುತ್ತಿಲ ಪರಿವಾರ ಕ್ಷೇತ್ರ ಉಪಾಧ್ಯಕ್ಷರಾದ ರಘುರಾಮ್ ರೈ, ಅನಂತ ಪ್ರಸಾದ್, ನಗರ ಅಧ್ಯಕ್ಷ ಮೋಹನ್ ಸೇರಾಜೆ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ, ಖ್ಯಾತ ನ್ಯಾಯವಾದಿ ಶಿವಾನಂದ ವಿಟ್ಲ, ಉದ್ಯಮಿಗಳಾದ ಸದಾಶಿವ ಆಚಾರ್ಯ, ಲಕ್ಷ್ಮಣ ಪೂಜಾರಿ ಮಚ್ಚ, ಯಕ್ಷಗಾನ ಕಲಾವಿದೆ ಅರ್ಶಿಯಾ ತನು, ಕ್ಷೇತ್ರ ಸಮಿತಿಯ ರೂಪೇಶ್, ಪ್ರಜ್ವಲ್ ಘಾಟೆ, ವಿಟ್ಲ ಮುಡ್ನೂರು ಅಧ್ಯಕ್ಷ ಹರೀಶ್ ಪೂಜಾರಿ, ನಗರ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಮಾಡ, ಕಾರ್ಯದರ್ಶಿಗಳಾದ ರವಿ ಅಂಚನ್, ಶರತ್ ಎನ್.ಎಸ್. ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಜತ್ತಪ್ಪ ಗೌಡ ನಾಯ್ತೊಟ್ಟು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕ ಈಶ್ವರಯ್ಯ ಉದ್ಘಾಟಿಸಿದರು.
ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ವೀರಪ್ಪ ಗೌಡ ರಾಯರಬೆಟ್ಟು, ನಿವೃತ್ತ ಅಧಿಕಾರಿ ರಾಜೀವ ಗೌಡ ಕೋಚೋಡಿ, ಸ್ಥಳದ ಮಾಲೀಕರಾದ ಕೃಷ್ಣಪ್ಪ ಪೂಜಾರಿ ಮಚ್ಚ, ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯರಾದ ಲತಾ ಅಶೋಕ್ ಪೂಜಾರಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪುರಂದರ ಅಂಚನ್ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ನಿತಿನ್ ಗೌಡ, ಹರೀಶ್ ಕಟ್ಟೆ, ಕುಶನ್, ಹೇಮಂತ್, ಚೇತನ್ ಮಾಮೇಶ್ವರ, ಶಶಿಕುಮಾರ್ ಕೋಚೋಡಿ, ಲಕ್ಷ್ಮೀನಾರಾಯಣ ಗೌಡ ಮಂಜಲಾಡಿ, ಸದಾಶಿವ ನಾಯಕ್ ಸಹಕರಿಸಿದರು.

























