ಪುತ್ತೂರು : ಹಿಂದೂ ಕಾರ್ಯಕರ್ತರ ಗಡಿಪಾರು ಆದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, ರಾಜ್ಯ ಸರಕಾರದ ಈ ನಡೆಯ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹಿಂದೂ ಕಾರ್ಯಕರ್ತರು ಸಮಾಜ ರಕ್ಷಣೆಗೆ ನಿಂತರೆ ಗಡಿಪಾರ್..!
ಅದೂ ಕೋರ್ಟ್ ಆರ್ಡರ್ ಇಲ್ಲದೆ, ಆದ್ರೆ ಮನೆಯಲ್ಲಿ ಸ್ಫೋಟಕ
ಸಿಕ್ಕಿದ್ರೂ ಬಾಂಧವರು ಭಯೋತ್ಪಾದಕರು ಅಲ್ಲಾ.
ಚೆನ್ನಾಗಿದೆ ಲಾಜಿಕ್ ಗ್ರಹ ಮಂತ್ರಿಗಳೇ.. ಆ್ಯಂಟಿ ಕಮ್ಯುನಲ್
ವಿಂಗ್ ಅನ್ನೋ ನಿಮ್ಮ ಹಿಡನ್ ಅಜೆಂಡಾ ಪಡೆಯನ್ನು
ಹಿಂಪಡೆಯದೇ ಇದ್ದರೆ ದಕ್ಷಿಣ ಕನ್ನಡದ ಜನ ನಿಮ್ಮ ಸರಕಾರದ
ಗ್ರಹಚಾರ ಬಿಡಿಸ್ತಾರೆ’
‘ಕೇವಲ ಹಿಂದೂ ಕಾರ್ಯಕರ್ತರಷ್ಟೇ ಮಾತ್ರ ನಿಮ್ಮ ಆ್ಯಂಟಿ
ಕಮ್ಯುನಲ್ ವಿಂಗ್ ನಿಂದ ಗಡಿಪಾರು ಆಗುವುದೇ..!?? ಉಳ್ಳಾಲದಲ್ಲಿ ಹಿಂದೂ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಮತಾಂಧರು ಗಡಿಪಾರು ಆಗುವ ನಿಯಮ ಈ ಕಾಯ್ದೆಯಡಿಗೆ ಬರುವುದಿಲ್ಲವೇ..!? ಓಲೈಕೆ ಸರ್ಕಾರ ಉತ್ತರಿಸಿ..!!’ ಎಂದು ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಸರಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲ ಹಿಂದೂ ಕಾರ್ಯಕರ್ತರ ಗಡಿಪಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಪ್ರತಿ ಹೊರಡಿಸಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ..




























