ಪುತ್ತೂರು : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇರ್ದೆ ಗ್ರಾಮದ ದೂಮಡ್ಕ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕು ಇರ್ದೆ ಗ್ರಾಮದ ತನ್ವೀರ್ ಮಂಜಿಲ್ ಜನತಾ ಕಾಲೋನಿ ನಿವಾಸಿ ತಪ್ಸಿರ್ (21) ಬಂಧಿತ ಆರೋಪಿ.
ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಧನಂಜಯ್ ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಇರ್ದೆ ಗ್ರಾಮದ ದೂಮಡ್ಕ ಗೋಳಿ ಪದವು ಎಂಬಲ್ಲಿಗೆ ತಲುಪಿದಾಗ ಸಾರ್ವಜನಿಕರ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಜನರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದ್ದು, ಸದ್ರಿ ವ್ಯಕ್ತಿಯನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲು ಅಸಮರ್ಥರಾಗಿದ್ದು, ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿರುವಂತೆ ಕಂಡು ಬಂದಿದ್ದು, ಬಳಿಕ ಆತನನ್ನು ವಿಚಾರಿಸಿದಾಗ ಆತನು ತಾನು ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ತಿಳಿಸಿದ್ದು, ಬಳಿಕ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಅವರಿಗೆ ಸದರಿ ವ್ಯಕ್ತಿ ಮಾದಕ ವಸ್ತುವನ್ನು ಸೇವಿಸಿರುತ್ತಾನೆ ಎಂಬುದರ ಬಗ್ಗೆ ದೃಢಪತ್ರಕ್ಕಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ತಪ್ಸಿ ರ್ ನನ್ನು ವೈದ್ಯಾಧಿಕಾರಿಯವರು ಪರೀಕ್ಷಿಸಿ ಸದ್ರಿಯವನು ಮಾದಕ ವಸ್ತುವನ್ನು ಸೇವನೆ ಮಾಡಿರುತ್ತಾನೆ ಎಂಬುದಾಗಿ ವೈದ್ಯಕೀಯ ದೃಢ ಪತ್ರವನ್ನು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲo: 27(b) NDPS Act ನಡಿ ಪ್ರಕರಣ ದಾಖಲಾಗಿದೆ.

























