ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ಉಪಚುನಾವಣೆ ನಡೆದಿದ್ದು, ನಾಳೆ ಜು.26 ಫಲಿತಾಂಶ ಪ್ರಕಟಗೊಳ್ಳಲಿದೆ.
ಪುತ್ತೂರು ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ.
ನಿಡ್ಪಳ್ಳಿ ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಪ್ರಭು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸತೀಶ್ ಶೆಟ್ಟಿ.
ಆರ್ಯಾಪು ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಂತಿಮ ಕಣದಲ್ಲಿದ್ದರು.
ನಿಡ್ಪಳ್ಳಿಯಲ್ಲಿ ಶೇ.87.14 ಹಾಗೂ ಆರ್ಯಾಪುನಲ್ಲಿ ಶೇ.80.73 ಮತದಾನವಾಗಿದೆ.
ಒಟ್ಟು 607 ಮತದಾರರನ್ನು ಹೊಂದಿರುವ ನಿಡ್ಪಳ್ಳಿ ವಾರ್ಡ್ 1ರ ಉಪ ಚುನಾವಣೆಯಲ್ಲಿ 254 ಪುರುಷರು ಹಾಗೂ 257 ಮಹಿಳೆಯರು ಸೇರಿದಂತೆ ಒಟ್ಟು 529 ಮಂದಿ ಮತ ಚಲಾಯಿಸಿದ್ದಾರೆ.
ಆರ್ಯಾಪು ಗ್ರಾ.ಪಂನ ವಾರ್ಡ್ 2ರಲ್ಲಿ ಒಟ್ಟು 1237 ಮಂದಿ ಮತದಾರರನ್ನು ಹೊಂದಿದ್ದು, ಇದರಲ್ಲಿ 515 ಪುರುಷರು ಹಾಗೂ 484 ಮಹಿಳೆಯರು ಸೇರಿದಂತೆ ಒಟ್ಟು 999 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
ಮತ್ತೆ ಚಾಲ್ತಿಯಲ್ಲಿ “ಒಂಜಿ ವೋಟ್ “ ದ ಬೆಟ್ಟಿಂಗ್
ವಿಧಾನ ಸಭಾ ಚುನಾವಣೆಯ ಫಲಿತಾಂಶದ ವೇಳೆ ಸದ್ದು ಮಾಡಿದ್ದ ಬೆಟ್ಟಿಂಗ್ ವಿಚಾರ ಈಗ ಮತ್ತೆ ಚಾಲ್ತಿಗೆ ಬಂದಿದ್ದು, ಗ್ರಾಮ ಪಂಚಾಯತ್ ಗಳ ಉಪಚುನಾವಣೆಯಲ್ಲಿ ಯಾರು ಜಯಭೇಟಿ ಬಾರಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಹಲವಾರು ಮಂದಿ ಈ ಬಗ್ಗೆ ಬೆಟ್ಟಿಂಗ್ ಕಟ್ಟಿದ್ದಾರೆನ್ನಲಾಗುತ್ತಿದೆ.
ಸಾರ್ವಜನಿಕರು ತಮ್ಮ-ತಮ್ಮ ನಡುವೆ ಚುನಾವಣಾ ವಿಚಾರ ಬೆಟ್ ಕಟ್ಟುತ್ತಿದ್ದಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.


























