ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಪುತ್ತೂರು ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಪ್ರಾರಂಭವಾಗಿದ್ದು, ಆರ್ಯಾಪು ಗ್ರಾಮ ಪಂಚಾಯತ್ ನ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಅಭ್ಯರ್ಥಿಗಳ ಭವಿಷ್ಯ ಕೆಲ ಹೊತ್ತಲ್ಲಿ ನಿರ್ಧಾರವಾಗಲಿದೆ.
ಆರ್ಯಾಪು ಗ್ರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಂತಿಮ ಕಣದಲ್ಲಿದ್ದರು.
ಆರ್ಯಾಪುನಲ್ಲಿ ಶೇ.80.73 ಮತದಾನವಾಗಿತ್ತು.
ಆರ್ಯಾಪು ಗ್ರಾ.ಪಂನ ವಾರ್ಡ್ 2ರಲ್ಲಿ ಒಟ್ಟು 1237 ಮಂದಿ ಮತದಾರರನ್ನು ಹೊಂದಿದ್ದು, ಇದರಲ್ಲಿ 515 ಪುರುಷರು ಹಾಗೂ 484 ಮಹಿಳೆಯರು ಸೇರಿದಂತೆ ಒಟ್ಟು 999 ಮಂದಿ ಮತದಾರರು ಮತಚಲಾಯಿಸಿದ್ದರು.


























