ಮಂಗಳೂರು: ಬೇಜವಾಬ್ದಾರಿ ಮತ್ತು ನಿಯಮ ಮೀರಿದ ವಾಹನ ಚಾಲನೆಗೆ ಮೂಗುದಾರ ತೊಡಿಸಲು ನಗರ ಪೊಲೀಸರು ಮುಂದಾಗಿದ್ದು, ಬರೋಬ್ಬರಿ 222 ಮಂದಿಯ ವಾಹನ ಚಾಲನೆ ಪರವಾನಿಗೆ ರದ್ದು ಪಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷ ಸಮಿತಿಯ ನಿರ್ದೇಶನದಂತೆ ಪ್ರತಿ ನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆ-1988/2019 ಅಡಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಚಾಲನ ಪರವಾನಿಗೆಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕಳುಹಿಸಲಾಗುತ್ತದೆ. ಈಗ 222 ಮಂದಿಯ ವಾಹನ ಚಾಲನ ಪರವಾನಿಗೆ ರದ್ದುಪಡಿಸಲು ಪೊಲೀಸ್ ಆಯುಕ್ತರು ಶಿಫಾರಸು ಮಾಡಿದ್ದಾರೆ.




























