ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಲಾಕ್ ಡೌನ್ ವಿಧಿಸುವ ಮೊದಲು ಬಡವರಿಗೆ ಅಗತ್ಯ ವಸ್ತುಗಳ ಪ್ಯಾಕೇಜ್ ಒದಗಿಸುವಂತೆ ಮಾಜಿ ಸಚಿವ ಬಿ ರಮಾನಾಥ ರೈ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕಾಂಗ್ರೆಸ್‌ನಲ್ಲಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಈಗಾಗಲೇ ಜನರು ಆರ್ಥಿಕವಾಗಿ ಬಳಲುತ್ತಿದ್ದಾರೆ. ನೆರೆಯ ರಾಜ್ಯಗಳಲ್ಲಿ ಪ್ಯಾಕೇಜ್ ಘೋಷಿಸಿದಂತೆ ಇಲ್ಲೂ ಫೋಷಿಸಿ, ಜೊತೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ಗಂಜಿ ಕೇಂದ್ರ’ ತೆರೆಯಬೇಕು” ಎಂದು ಸರ್ಕಾರಕ್ಕೆ ಸೂಚಿಸಿದ್ದಾರೆ.
“ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ, ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಕ್ಯಾಂಟೀನ್ ಪ್ರಾರಂಭಿಸಿ ಮತ್ತು ಕೊರೊನಾ ರೋಗಿಗಳ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಿ” ಎಂದರು.”ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ, ರಾಜ್ಯದ ಜನರು ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಆದರೆ ರಾಜ್ಯದಲ್ಲಿ ಲೂಟಿಕೊರರು ಆಡಳಿತ ನಡೆಸುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಪ್ಪು ನಿರ್ವಹಣೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.ಇನ್ನು ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ ಕೊರೊನಾ ರೋಗಿಗಳ ಸಹಾಯಕ್ಕೆ ಆಂಬ್ಯುಲೆನ್ಸ್ ಮತ್ತು ಆಕ್ಸಿಜನ್ ಸೇವೆಯನ್ನು ಪ್ರಾರಂಭಿಸಿದ್ದು, ಅಗತ್ಯವಿರುವವರಿಗೆ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ, ಕಾಂಗ್ರೆಸ್ ಮುಖಂಡ ಸಾದಶಿವ ಉಳ್ಳಾಲ, ಶಶಿಧರ್ ಹೆಗ್ಡೆ, ಸಾಹುಲ್ ಹಮೀದ್, ನವೀನ್ ಡಿ ಸೋಜಾ, ಪ್ರಕಾಶ್ ಸಾಲಿಯನ್, ವಿಶ್ವಾಸ್ ದಾಸ್, ಟಿ.ಕೆ.ಸುಧೀರ್, ಎಸಿ ವಿನಾಯರಾಜ್, ಪ್ರವೀಣ್ ಆಳ್ವ ಮತ್ತು ಶುಭೋದ್ ಆಳ್ವ ಉಪಸ್ಥಿತರಿದ್ದರು.