ಪುತ್ತೂರು : ಓಲೆ ಮುಂಡೋವೂ ಹಾಗೂ ಕುಂಬ್ರ ಪರಿಸರದ ಹಲವಾರು ಮುಸ್ಲಿಂ ಕುಟುಂಬಗಳಿಗೆ ರಂಜಾನ್ ಕಿಟ್ ನೀಡುವುದರ ಮೂಲಕ ‘ಮನ್ಮಿತ್ ರೈ’ ರವರು ಮಾನವೀಯತೆ ಹಾಗೂ ಸೌಹಾರ್ದತೆ ಮೆರೆದಿದ್ದಾರೆ.
ಕಳೆದ ಬಾರಿಯ ಲಾಕ್ ಡೌನ್ ಹಾಗೂ ರಂಜಾನ್ ಸಂದರ್ಭದಲ್ಲಿ ರಂಜಾನ್ ಕಿಟ್ ನೀಡಿದ್ದ ಅವರು ಈ ಸಲವೂ ಸುಮಾರು 160 ರಷ್ಟು ಕುಟುಂಬಗಳಿಗೆ ರಂಜಾನ್ ಕಿಟ್ ಅನ್ನು ನೀಡಿದ್ದಾರೆ.’ಎಂ. ಆರ್’ ಗ್ರೂಪ್ ಮೂಲಕ ಅದೆಷ್ಟೋ ಅಶಕ್ತರಿಗೆ ಆಸರೆಯಾಗಿ ನಿಲ್ಲುವ ಇವರು ತನ್ನ ಹುಟ್ಟೂರಿನ ಬಡವರ ಪರವೂ ಸಹಾಯಹಸ್ತವನ್ನು ನೀಡುವುದರ ಮೂಲಕ ಸುದ್ಧಿಯಾಗುತ್ತಿದ್ದಾರೆ.ಕಳೆದ ಬಾರಿ ಬಡವರಿಗೂ ಉಚಿತ ಕಿಟ್ ನೀಡಿ ಹಲವಾರು ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದರು.