ಬಂಟ್ವಾಳ: ಆಟೋ ರಿಕ್ಷಾ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ.
ಅಪಘಾತದಲ್ಲಿ ಆಟೋ ಚಾಲಕ, ಸೂರಿಕುಮೇರ್ ನಿವಾಸಿ ಹನೀಪ್ ಗಾಯಗೊಂಡಿದ್ದಾರೆ.
ರಿಕ್ಷಾ ಸೂರಿಕುಮೇರ್ ನಿಂದ ಮಾಣಿ ಕಡೆಗೆ ಹಾಗೂ ಕಾರು ಮಂಗಳೂರು ಕಡೆಯಿಂದ ಪುತ್ತೂರಿಗೆ ಚಲಾಯಿಸುತ್ತಿದ್ದಾಗ ಈ ಅವಘಢ ಸಂಭವಿಸಿದೆ.


























