ಬೆಳ್ತಂಗಡಿ : ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು,ಕಡಬ ಸುಳ್ಯ, ಮಂಗಳೂರು ಇದರ ಯುವ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳು ಸೌಜನ್ಯ ಮನೆಗೆ ಭೇಟಿ ನೀಡಿದರು.

ಕೆಲ ವರುಷಗಳ ಹಿಂದೆ ಹತ್ಯೆಯಾದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ರಾಜ್ಯ ಒಕ್ಕಲಿಗ ಸೇವಾ ಸಂಘ ಆಗ್ರಹಿಸುತ್ತಿದ್ದು, ಸೌಜನ್ಯ ಕುಟುಂಬಸ್ಥರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದೆ.

ಒಕ್ಕಲಿಗ ಸಮಾಜ ನಿಮ್ಮೊಂದಿಗೆ ಇದೆ. ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಿದ್ದೇವೆ ಎಂದು ಭರವಸೆ ನೀಡಿರುವುದಾಗಿ ವರದಿಯಾಗಿದೆ.



























