ವಿಟ್ಲ : ಪುತ್ತಿಲ ಪರಿವಾರ ಕುಂಡಡ್ಕ, ಕುಳ ಮತ್ತು ವಿಟ್ಲ ಮೂಡ್ನೂರು ಗ್ರಾಮದ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್ ರಿ. ಗಾಂಧಿನಗರ ಮಂಗಳೂರು ಇದರ ಆಶ್ರಯದಲ್ಲಿ
ಯೇನಾಪೋಯ ಕಾಲೇಜು ಮತ್ತು ಆಸ್ಪತ್ರೆ ಇದರ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಹಾಗೂ ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಯೇನಾಪೋಯ ಡೆಂಟಲ್ ಕಾಲೇಜಿನ ಪ್ರಾಧ್ಯಪಕರಾದ ಡಾ. ಅಪೂರ್ವ, ಯೇನಾಪೋಯ ಯೂನಿವರ್ಸಿಟಿಯ ಆರ್.ಎಚ್. ಸಿ. ಡಿ. ಸಿ ಮೆಡಿಕಲ್ ಆಫೀಸರ್ ಡಾ. ಶ್ರೀನಿವಾಸ್ ಪಟೇಲ್, ಯೇನಾಪೋಯ ಡೆಂಟಲ್ ಕಾಲೇಜಿನ ಪ್ರೊ. ಭರತ್ ಕುಮಾರ್, ಯೇನಾಪೋಯ ಯೂನಿವರ್ಸಿಟಿಯ ಆರ್.ಎಚ್. ಸಿ. ಡಿ. ಸಿ ಎಂ.ಎಸ್. ಡಬ್ಲ್ಯೂ ಗಾಯತ್ರಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಕರ್ನಾಟಕ ಇದರ ಪದಾಧಿಕಾರಿಗಳಾದ ಚಂದ್ರಶೇಖರ ನಾಯಕ್ ಮತ್ತು ನಿರಂಜನ್ ಹೆಬ್ಬಾರ್, ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕದ ಸಂಚಾಲಕರಾದ ವೇಣುಗೋಪಾಲ ಶೆಟ್ಟಿ, ವಿಟ್ಲ ಪುತ್ತಿಲ ಪರಿವಾರದ ಅಧ್ಯಕ್ಷರಾದ ಮೋಹನ್ ಸೇರಾಜೆ, ಕುಂಡಡ್ಕ ಪುತ್ತಿಲ ಪರಿವಾರದ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಕುಳ ಪುತ್ತಿಲ ಪರಿವಾರದ ಅಧ್ಯಕ್ಷರಾದ ಮನೋಹರ ಶೆಟ್ಟಿ ಜೈನೆರೆಕೋಡಿ ಹಾಗೂ ಇತರ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ರನ್ನು ಸನ್ಮಾನಿಸಲಾಯಿತು. ಗುಣಶ್ರೀ ವಿದ್ಯಾಲಯಕ್ಕೆ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಹರೀಶ್ ಪೂಜಾರಿ ಮರುವಾಳ ಸ್ವಾಗತಿಸಿದರು. ವಿಜೆ ನಮಿತಾ ಕಾರ್ಯಕ್ರಮ ನಿರೂಪಿಸಿದರು. ರಾಧಿಕಾ ರಾಜೇಶ್ ಭಟ್ ಕುಳ ಧನ್ಯವಾದಗೈದರು.






























