ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದ್ದು, ಇದೀಗ ಎಲ್ಲರ ಚಿತ್ತ ನಗರಸಭಾ ಉಪಚುನಾವಣೆಯತ್ತ ತಿರುಗಿದೆ.
ಊರಮಾಲು ನಿವಾಸಿ, ವಾರ್ಡ್ ನಂ.1 ನಗರ ರಕ್ತೇಶ್ವರಿ ವಠಾರದ ನಗರಸಭಾ ಸದಸ್ಯ ಶಿವರಾಮ ಸಪಲ್ಯ ಮಾ.16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸ್ಥಾನ ತೆರವಾಗಿದೆ. ಈ ಹಿನ್ನೆಲೆ ಉಪಚುನಾವಣೆ ನಡೆಯಲಿದೆ.

ಮೃತ ಶಿವರಾಮ್ ಸಪಲ್ಯ
ಕಳೆದ ಬಾರಿಯ ನಗರಸಭಾ ಚುನಾವಣೆಯಲ್ಲಿ ವಾರ್ಡ್ ನಂ.1 ರಲ್ಲಿ ಬಿಜೆಪಿ 548, ಕಾಂಗ್ರೆಸ್ 370, ಹಾಗೂ 11 ನೋಟಾ ಮತಗಳು ಚಲಾವಣೆಯಾಗಿತ್ತು.
ವಾರ್ಡ್ ನಂ.1 ನಗರ ರಕ್ತೇಶ್ವರಿ ವಠಾರ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ವಾರ್ಡ್ ನಲ್ಲಿ ಹೆಚ್ಚು ಬಾರಿ ಬಿಜೆಪಿಯೇ ಜಯ ಗಳಿಸಿದೆ.
1997 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣವೇಣಿ ರವರು ಜಯಗಳಿಸಿದ್ದು, ಬಳಿಕ ಅವರು ರಾಜೀನಾಮೆ ನೀಡಿದ್ದು, ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಧಾ ಜಯಗಳಿಸಿದ್ದರು.
2002 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಪೂಜಾರಿ, 2007 ರಲ್ಲಿ ಬಿಜೆಪಿ ಅಭ್ಯರ್ಥಿ ಸೋಮಪ್ಪ ಸಪಲ್ಯ, 2013 ರಲ್ಲಿ ಬಿಜೆಪಿ ಅಭ್ಯರ್ಥಿ ಸೋಮಪ್ಪ ಸಪಲ್ಯ, 2018 ರಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಸಪಲ್ಯ ಜಯಗಳಿಸಿದ್ದರು.
ಪುತ್ತೂರು ತಾಲೂಕಿನಲ್ಲಿ ತೆರವಾಗಿರುವ ಗ್ರಾಮ ಪಂಚಾಯತ್ ನ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆದು ಫಲಿತಾಂಶ ಕೂಡ ಪ್ರಕಟಗೊಂಡಿದ್ದು, ಇದೀಗ ನಗರಸಭೆಯಲ್ಲಿ ತೆರವಾಗಿರುವ ಸ್ಥಾನದ ಉಪಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಪುತ್ತಿಲ ಪರಿವಾರದಿಂದ ಅಭ್ಯರ್ಥಿ ಕಣಕ್ಕೆ ..!!!!
ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದು ಖಾತೆ ತೆರೆದಿರುವ ಪುತ್ತಿಲ ಪರಿವಾರ ನಗರ ಸಭಾ ಉಪಚುನಾವಣೆಯತ್ತ ಚಿತ್ತ ಹರಿಸಿದ್ದು ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಮತ್ತೆ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಮುಂದಿನ 2-3 ತಿಂಗಳೊಳಗೆ ನಗರಸಭಾ ಉಪಚುನಾವಣೆಗೆ ಕೂಡ ಆದೇಶ ಬರಲಿದೆ ಎನ್ನಲಾಗುತ್ತಿದೆ.


























