ಪುತ್ತೂರು : ಕಳವುಗೈದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರ ಠಾಣಾ ಅಕ್ರ 69/2023 ಕಲಂ 379ರಲ್ಲಿ 10 ಲಕ್ಷ ಕಳುವಾದ ಬಗ್ಗೆ ಸದರಿ ಪ್ರಕರಣದ ಆರೋಪಿ ಮತ್ತು ಸ್ವತ್ತು ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದು ಸದ್ರಿ ತಂಡವು ಆರೋಪಿಯನ್ನು ದಸ್ತಗಿರಿ ಮಾಡಿ 3 ಲಕ್ಷದ 79 ಸಾವಿರ ಹಣವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಸದ್ರಿ ಪತ್ತೆ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕ ರವರ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರವರ ನಿರ್ದೇಶನದಲ್ಲಿ, ಪುತ್ತೂರು ವಿಭಾಗ ಡಿವೈಎಸ್ಪಿ ಗಾನಾ ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಠಾಣೆ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್. ಸಿ .ಸ್ಕರಿಯಾ, ಜಗದೀಶ್, ಪಿ.ಸಿ. ಭೀಮಸೇನ, ಕಿರಣ್ ಕುಮಾರ್ ,ವಿನಾಯಕ ಮತ್ತು ಸಿ.ಡಿ.ಆರ್ ವಿಭಾಗದ ಸಂಪತ್ , ದಿವಾಕರ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದಾರೆ.

























