ವಿಟ್ಲ : ತೀಯಾ ಸ್ನೇಹವಾಹಿನಿ ಒಕ್ಕೂಟದ ವತಿಯಿಂದ ಅಳಿಕೆ ಮೂಡಾಯಿಬೆಟ್ಟು ಕೃಷಿಗದ್ದೆಯಲ್ಲಿ ನಡೆದ ಕಂಡೊದ ಕೆಸರ್ಡ್ ಕುಸಾಲ್ದ ಗೊಬ್ಬುಲು, ಆಟಿದ ಅಟ್ಟಿಲ್ದ ಪಂತೋ ಅಭೂತಪೂರ್ವ ವಾಗಿ ಸಂಪನ್ನಗೊಂಡಿತು.

ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರಾದ ಗೋಪಾಲ ಬೆಳ್ಚಪ್ಪಾಡ ರವರು ದೀಪವನ್ನು ಪ್ರಜ್ವಲಿಸಿ ಆಶೀರ್ವಾದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾಜದ ಹಿರಿಯರು ಸಾಮಾಜಿಕ ಮುಂದಾಳು ಜಯರಾಮ ಉಕ್ಕುಡ ರವರು ಕಳಸೆಗೆ ಭತ್ತ ತುಂಬುವ ಮುಖೇನಾ, ಬೋಳ್ನಾಡು ಕ್ಷೇತ್ರದ ಬಾಲಾಲಯದಲ್ಲಿ ದೀಪ ಬೆಳಗುವ ಚಂದ್ರಶೇಖರ ಮಡಿಯಾಲ ರವರು ಗದ್ದೆಗೆ ಹಾಲೆರೆದು, ವೇದಿಕೆಯಲ್ಲಿ ಉಪಸ್ಥಿತರಿದ್ದ ಅಳಿಕೆ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಧ್ಯಪಕ ಶ್ರೀಧರ್ ಕೆ. ಮುಚ್ಚಿರಪದವು ಶಾಲೆಯ ಮುಖ್ಯೋಪಧ್ಯಾಯರಾದ ನಾಗೇಶ್ ಮಾಸ್ಟರ್ ಮೈರ, ಹಿರಿಯರಾದ ಅಪ್ಪುಕುಞ ಬೆಳ್ಚಾಡ, ಪುತ್ತೂರು ತೀಯಾಸಮಾಜ ನಿಂತಿಕಲ್ ವಲಯದ ಅಧ್ಯಕ್ಷ ಚಂದ್ರಶೇಖರ್, ಅಳಿಕೆ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಯಾದವ ನಡುಗುತ್ತು , ಪಂಜದ ಉದ್ಯಮಿ ಯುವ ನೇತಾರ ಮನು ತೊಂಡಚ್ಚ ಕನ್ಸ್ಟ್ರಕ್ಷನ್ ಒಟ್ಟು ಸೇರಿ ಗದ್ದೆಗೆ ಭತ್ತ ಬಿತ್ತನೆ ಮಾಡಿ ಆಟೋಟಗಳಿಗೆ ಚಾಲನೆ ನೀಡಿದರು.

ಆಟಿದ ಅಟ್ಟಿಲ್ದ ಪಂತೋದಲ್ಲಿ 34 ಮನೆಗಳಿಂದ ವಿವಿಧ ಶುಚಿ,ರುಚಿಯ ತಿಂಡಿ ತಿನಿಸುಗಳ ಸಮಾಗಮವಿತ್ತು. ಈ ವಿಶೇಷ ಸ್ಪರ್ಧೆಯ ನಿರ್ಣಾಯಕರಾಗಿ ಅಶ್ವಿನಿ ವರ್ಕಾಡಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮತ್ತು ಬಳಗ ಹಾಗೂ ಮಾಧವ ಕೇಪುಳಗುಡ್ಡೆಯವರು ಸಹಕರಿಸಿದರು.
ಗದ್ದೆಯಲ್ಲಿ ಮನೋರಂಜಿತ, ವೈಶಿಷ್ಠ್ಯದಿಂದ ಕೂಡಿದ ಆಟೋಟಗಳು ನಡೆದವು ವಿಶೇಷವಾಗಿ ಆಯೋಜಿಸಿದ ಸ್ಪರ್ಧೆಗಳಿಗೆ ಅಕ್ಕಿಮುಡಿ ಹಾಗೂ ಇತರ ಸ್ಪರ್ದೆಗಳಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಆನಂದ ಗುರಿಕಾರ ಕುಟ್ಟಿತ್ತಡ್ಕ, ರಾಘವ ಗುರಿಕಾರ ಕೇಪುಳಗುಡ್ಡೆ, ಪುರುಷೊತ್ತಮ ಪುತ್ತೂರು, ವಿಷ್ಣುಮೂರ್ತಿ ಸೇವಾಸಮಿತಿ ಗುವೆದಪಡ್ಪು ಅಧ್ಯಕ್ಷ ಸೋಮಪ್ಪ ಬೆಳ್ಚಾಡ ಗುವೆದಪಡ್ಪು,ತರವಾಡು ಪ್ರಮುಖರು,ಕ್ಷೇತ್ರಗಳ ಪ್ರಮುಖರು ಸಮಾಜದ ಹಿರಿಯರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಎಲ್ಲಾ ಭಾಗದ ತೀಯಾ ಸಮಾಜದವರು ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಮೀಳಾ ನವೀನ್ ಮೂಡಾಯಿಬೆಟ್ಟು ಪ್ರಾರ್ಥಿಸಿ, ಸಂತೋಷ್ ಮುರ ಸ್ವಾಗತಿಸಿ, ಸುರೇಶ್ ವಿಟ್ಲ ಧನ್ಯವಾದವಿತ್ತರು. ಸದಾಶಿವ ಅಳಿಕೆ ನಿರ್ವಹಿಸಿದರು.

ಆಟೋಟ ಹಾಗೂ ಇನ್ನಿತರ ವ್ಯವಸ್ಥೆಗಳ ನಿರ್ವಾಹಕರಾಗಿ ರಾಜೇಶ್ ಕರವೀರ, ಶಿವರಾಮ ಮೂಡಾಯಿಬೆಟ್ಟು,ರಾಘವೇಂದ್ರ ಪ್ರಸಾದ್, ಹರೀಶ್ ಆಲಂಗಾರ್, ಅಶೋಕ್ ಕರವೀರ, ಸಂತೋಷ್ ಕರವೀರ, ನವೀನ್ ಮೂಡಾಯಿಬೆಟ್ಟು, ಸಂತೋಷ್ ಮೂಡಾಯಿಬೆಟ್ಟು ,ಸಂತೋಷ್ ಎರುಂಬು, ಶಿವಪ್ರಸಾದ್ ಮೂಡಾಯಿಬೆಟ್ಟು, ಅಜೇಯ್ ನೀರ್ಕಜೆ, ಪ್ರವೀಣ್ ನೀರ್ಕಜೆ, ಸತೀಷ್ ವಿಟ್ಲ, ಕೃಷ್ಣಮೈರ, ಸುನೀಲ್ ವಿಟ್ಲ,ಮಿಥುನ್,ಹರ್ಷಿತ್ ಚೆಂಡುಕಳ,ಸೌಮ್ಯ ಮೂಡಾಯಿಬೆಟ್ಟು,ಪ್ರಮಿಳ ಮೂಡಾಯಿಬೆಟ್ಟು,ಭವ್ಯ ಮೂಡಾಯಿಬೆಟ್ಟು,ಸ್ವಸ್ಥಿಕ್ ನೀರ್ಕಜೆ,ನವೀನ್ ಮೂಡಾಯಿಬೆಟ್ಟು,ಕೃಷ್ಣಪ್ಪ ನೆಕ್ಕಿತ್ತಪುಣಿ, ಚಂದ್ರಶೇಖರ್ ವಿಟ್ಲ,ಸುಮಲತ ಕರವೀರ ಸಹಕರಿಸಿದರು.


























