ಪೆರ್ಲ : ಚೆರ್ಕಳ –ಕಲ್ಲಡ್ಕ ಅಂತರಾಜ್ಯ ರಸ್ತೆಯ ಅಡ್ಕಸ್ಥಳ
ಎಂಬಲ್ಲಿನ ಸೇತುವೆ ಬಳಿಕ ಅಪಘಾತಕ್ಕೀಡಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದ ಮಣಿಯಂಪಾರೆ ಸಮೀಪದ ಮಣ್ಣಂಗಳ ನಿವಾಸಿ ನೀರೋಳ್ಯದ ಜಾನು ನಾಯ್ಕ್ ಎಂಬವರ ಪುತ್ರ ರೋಶನ್ (29) ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದರು.

ಇಂಜಿನಿಯರಿಂಗ್ ಪದವಿ ಗಳಿಸಿಕೊಂಡಿದ್ದ ರೋಶನ್ ಮನೆಯಲ್ಲಿಯೇ ವಿದೇಶ ಕಂಪೆನಿಯೊಂದಕ್ಕೆ ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುತ್ತಿದ್ದರು.
ಈ ನಡುವೆ ಗುರುವಾರ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ನೇಮಕದ ನಿಮಿತ್ತ ಇಂಟರ್ ವ್ಯೂಗೆ ತನ್ನ ಸ್ವಂತ ಕಾರಿನಲ್ಲಿ ತೆರಳಿದ್ದು ಸಂಜೆ ಮರಳುವ ವೇಳೆ ವಿಟ್ಲದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಡ್ಕಸ್ಥಳ ಸೇತುವೆಯ ಬದಿಯಲ್ಲಿನ ಆರು ಫಿಲ್ಲರ್ ಗಳಿಗೆ ಬಡಿದುಕೊಂಡು ಬಂದ ಕಾರು ಸ್ಕಿಡ್ ಆಗಿ ರಸ್ತೆಯಲ್ಲಿಯೇ ಮಗುಚಿ ಬಿದ್ದಿತ್ತು.
ಮೃತರು ತಾಯಿ, ಪತ್ನಿ, ಪುಟ್ಟ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.




























