ಪುತ್ತೂರು : ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾವು ಅಮ್ಚಿನಡ್ಕ ನಿವಾಸಿ ಕಿರಣ್ ಕುಮಾರ್, ಕಾವು ಅಮ್ಚಿನಡ್ಕ ನಿವಾಸಿ ಸಂತೋಷ್ ಬಂಧಿತ ಆರೋಪಿಗಳು.

ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಅಮ್ಮಿನಡ್ಕ ಎಂಬಲ್ಲಿರುವ ವಿಷ್ಣು ಕಲ್ಲುರಾಯ ರವರ ಮನೆಯ
ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದ 10 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಮಾರು 2 ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಮತ್ತು ಹುಲ್ಲು ತೆಗಿಯುವ ಮೇಷಿನ್ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 73/2023 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ಬಂಧಿಸಿ ಸುಮಾರು ರೂ 51,000/- ಮೌಲ್ಯದ 1 ಕಿಂಟ್ವಾಲ್ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು ರೂ 5,000/-ಮೌಲ್ಯದ ಹುಲ್ಲು ತೆಗಿಯುವ ಮೇಷಿನ್ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಸಿನಾನ್ ಪರಾರಿಯಾಗಿರುತ್ತಾನೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ. ಗಾನ ಪಿ, ಕುಮಾರ್ ರವರ
ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ.ಬಿ.ಎಸ್, ಪುತ್ತೂರು
ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ, ಎಎಸ್ಐ ಮುರುಗೇಶ್, ಸಿಬ್ಬಂದಿಗಳಾದ
ಬಾಲಕೃಷ್ಣ, ಅದ್ರಾಮ ಪ್ರವೀಣ್ ರೈ, ಲೋಕೇಶ್, ಜಗದೀಶ್, ಮುನಿಯ ನಾಯ್ಕ, ಚಾಲಕರಾದ ಯೋಗೀಶ್ ಭಾಗವಹಿಸಿರುತ್ತಾರೆ.




























