ಪುತ್ತೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಈ ನಿಟ್ಟಿನಲ್ಲಿ ಬೆಳ್ಳಿಗೆ 6 ರಿಂದ 9 ಗಂಟೆಗಳ ವರೆಗೆ ಮಾತ್ರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಿದ್ದು,
ಪೇಟೆಯ ಒಳ ಭಾಗದ ಸಾಲ್ಮಾರ, ಹಾರಾಡಿ,ಪಡೀಲ್ ದರ್ಬೆ ಬಳಿ 9 ಗಂಟೆ ನಂತರವೂ ತೆರೆದಿದ್ದ ಕೆಲ ಅಂಗಡಿಗಳನ್ನು ನಗರ ಸಭೆ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಿಸಿದ ಘಟನೆ ಇಂದು ನಡೆಯಿತು.