ವಿಟ್ಲ : ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೆಟ್ಲಮುಡ್ನೂರು ಗ್ರಾಮದ ಗಣೇಶ್ ನಗರ ಎಂಬಲ್ಲಿ ನಡೆದಿದೆ.
ಬಂಟ್ವಾಳ ಮುಡ್ನೂರು ಗ್ರಾಮದ ನಿವಾಸಿ ಶಶಿಧರ್ ಶೆಟ್ಟಿ ಎಂಬವರು ನೆಟ್ಲಮುಡ್ನೂರು ಗ್ರಾಮದ ಗಣೇಶ್ ನಗರ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.
ಗಣೇಶ್ ನಗರ ಎಂಬಲ್ಲಿ ಸಾರ್ವಜನಿಕ ಡಾಮರು ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ವಿಟ್ಲ ಠಾಣಾ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ಆತನ ವಶದಲ್ಲಿದ್ದ ಕೈಚೀಲವನ್ನು ಪರಿಶೀಲಿಸಲಾಗಿ ಅಂದಾಜು ರೂ 1,516.21/- ಮೌಲ್ಯದ ವಿವಿಧ ಕಂಪೆನಿಯ ಒಟ್ಟು ಪ್ರಮಾಣ 2.880 ಲೀಟರ್ ಅಕ್ರಮ ಮದ್ಯದ ಸ್ಯಾಚೆಟ್ ಗಳು ಹಾಗೂ ಮದ್ಯ ಮಾರಾಟದಿಂದ ಬಂದ ರೂಪಾಯಿ 550/- ದೊರಕಿರುತ್ತದೆ.
ಆರೋಪಿಯು ವೈನ್ ಶಾಫ್ ನಿಂದ ಮದ್ಯವನ್ನು ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಿರುತ್ತೇನೆ ಎಂದು ಒಪ್ಪಿಕೊಂಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 140/2023 ಕಲಂ: 32, 34 KE ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.