ಬೆಳ್ತಂಗಡಿ : ಹಿಂದೂ ಮುಖಂಡ ಹಾಗೂ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನ್ಯಾಯಕ್ಕಾಗಿ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ರವರ ನಿವಾಸಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಇಂದು ಭೇಟಿ ನೀಡಿದರು.

ಸೌಜನ್ಯ ಪ್ರಕರಣ ನಡೆದು 11 ವರುಷ ಕಳೆದರೂ ಪ್ರಕರಣದ ನೈಜ ಆರೋಪಿಗಳ ಬಗ್ಗೆ ಸುಳಿವು ಸಿಗದ ಹಿನ್ನೆಲೆ ಸಾರ್ವಜನಿಕರು ಸ್ವಪ್ರೇರಿತವಾಗಿ ಹೋರಾಟಕ್ಕಿಳಿದಿದ್ದು, ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.