ವಿಟ್ಲ : ಕೆಮಿಕಲ್ ಮಿಶ್ರಿತ ವಿಷಪೂರಿತ ಘಾಟು ವಾಸನೆಯ ಕೊಳಕು ನೀರನ್ನು ಟ್ಯಾಂಕರ್ ಮುಖಾಂತರ ತಂದು ಅಮೈ ಚೆಲ್ಲಡ್ಕ ಹಾದು ಹೋಗುವ ತೋಡಿಗೆ ಮತ್ತು ವಾಸದ ಮನೆಯ ಬಳಿ ಇರುವ ಬಾವಿಯ ಪಕ್ಕತೋಟಕ್ಕೆ ಬಿಡುತ್ತಿದ್ದು, ಇದರಿಂದಾಗಿ ಹಲವು ಸ್ಥಳಗಳಲ್ಲಿ ದುರ್ವಾಸನೆ ಬರುತ್ತಿದ್ದು, ಹೀಗೆ ಇದು ಕೆಲ ದಿನಗಳ ವರೆಗೆ ಮುಂದುವರೆದರೆ ಜನರ ಜೀವನಕ್ಕು ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರು /ಪಂಚಾಯತ್ ಸರ್ವಸದಸ್ಯರು / ಅಭಿವೃಧ್ಧಿ ಅಧಿಕಾರಿ/ಕಾರ್ಯದರ್ಶಿ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯುಕ್ತರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ, ಕೇಪು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗೆ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗೆ, ತಾಲೂಕು ದಂಡಾಧಿಕಾರಿಗೆ ಸ್ಥಳೀಯರು ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವಿನ ಸರ್ವೇ ನಂಬರ್ 300 ರಲ್ಲಿ ಹಾದು ಸರ್ವೇ ನಂಬರ್ 300/1 ಮುಖಾಂತರ ದಕ್ಷಿಣ ಪೂರ್ವ ಉತ್ತರ ದಿಕ್ಕಿನಲ್ಲಿ ಹಾದು ಹೋಗುವ ತೋಡಿಗೆ ಮತ್ತು ತೋಟಕ್ಕೆ ವಿಷಪೂರಿತ ಕೆಮಿಕಲ್ ಯುಕ್ತ ಘಾಟು ವಾಸನೆಯ ನೀರನ್ನು ಪರಿಸರದ ನಾಗರಿಕರಿಗೆ ತಿಳಿಯದಂತೆ ಸಾಧಾರಣ ಎರಡು ತಿಂಗಳಿಂದ ಟ್ಯಾಂಕರ್ ಮುಖಾಂತರ ತಂದು ಸುರಿದು ಹೋಗುತ್ತಿದ್ದು, ವಾಸನೆಯಲ್ಲಿ ಬದುಕಲು ಕಷ್ಟವಾಗುತಿತ್ತು. ಆದರೇ ಯಾಕೆ ಘಾಟು ವಾಸನೆ ಬರುವುದು ಎಂದು ತಿಳಿಯಲಿಲ್ಲ.., ಯಾವುದೋ ಪ್ರಾಣಿ ಸತ್ತಿರಬಹುದು ಎಂದು ತಿಳಿದಿದ್ದೇವೆ. ಆದರೆ ಈ ವಾಸನೆ ಹಗಲು ಇರುಲೆನ್ನದೆ ಯಾವಾಗಲೂ ಇರುತಿತ್ತು. ಸಾಧಾರಣ ನಾಲ್ಕು ತಿಂಗಳಿಂದ ಪರಿಸರದ ಸಾಕು ಪ್ರಾಣಿಗಳು ಸತ್ತು ಹೋಗಿರುತ್ತದೆ. ಆದರೆ ಕಾರಣವೇನು ಎಂದು ತಿಳಿಯಿತ್ತಿರಲಿಲ್ಲ.
ಜು.26 ರಂದು ಏಚರ್ ಸೆಪ್ಟಿಕ್ ಟ್ಯಾಂಕರ್ ಮಾರ್ನಿಂಗ್ ಸ್ಟಾರ್ ಗಾಡಿಯಲ್ಲಿ ವಿಷಪೂರಿತ ಕೆಮಿಕಲ್ ಫ್ಲೋರೈಡ್ ಮಿಶ್ರಿತ ನೀರನ್ನು ತೋಡಿಗೆ ಬಿಡುವಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದು ಇದು ಕೇರಳದಿಂದ ಇಷ್ಟು ದೂರ ತಂದು ಬಿಡಲು ಕಾರಣವೇನು? ಇದು ಯಾವುದೋ ಒಂದು ಕುಟುಂಬವನ್ನು ನಾಶಮಾಡುವ ವ್ಯವಸ್ಥಿತ ಷಡ್ಯಂತ್ರ ಉದ್ದೇಶವು ಆಗಿರಬಹುದು ಈ ತೋಡು ಹಾದು ಹೋಗುವ ಬದಿಯಲ್ಲಿ ಕುಡಿಯುವ ನೀರಿನ ಬಾವಿ ಹೊಳ ಗದ್ದೆ ಮನೆ ಇದ್ದು ಈ ಬಾವಿಯ ನೀರನ್ನು ದಿನ ಬಳಕೆಗೆ ಉಪಯೋಗಿಸುತ್ತಿದ್ದು ಒಂದು ವೇಳೆ ವಿಷಪೂರಿತವಾದರೆ ಆ ನೀರನ್ನು ಉಪಯೋಗಿಸುವರು ಸರ್ವನಾಶವಾಗಬಹುದೇ ಎನ್ನುವ ಉದ್ದೇಶದಿಂದ ಮಾಡಿದ್ದಾಗಿರಬಹುದ, ಕೆಮಿಕಲ್ ನೀರನ್ನು ತೋಡು ಅಥವಾ ತೋಟಕ್ಕೆ ಬಿಡುವುದರಿಂದ ಅಕ್ಕ ಪಕ್ಕದಲ್ಲಿ ಇರುವವರು ಹೇಗೆ ಜೀವನ ಮಾಡಬೇಕು ಈ ನೀರನ್ನು ನಾವು ಉಪಯೋಗಿಸುತ್ತಿದ್ದು ನಮಗೆ ಮುಂದೆ ಯಾವ ರೀತಿಯ ಅನಾರೋಗ್ಯ ಬರಬಹುದು ಈ ಕೆಲಸ ಮಾಡುವ ಕ್ರಿಮಿನಲ್ ಮೈಂಡಿನ ಹಿಂದೆ ಯಾರು ಇದ್ದಾರೆ ಇವರ ಉದ್ದೇಶ ಏನು? ಎಂಬುದನ್ನು ಪತ್ತೆ ಹಚ್ಚಿ ಟ್ಯಾಂಕರ್ ಮಲಿನವನ್ನು ಲಾಬ್ ಟೆಸ್ಟ್ ಮಾಡಿ ಕೂಲಂಕುಶ ತನಿಖೆ ಮಾಡಿ ಶಿಕ್ಷೆ ನೀಡಬೇಕಾಗಿ ವಿನಂತಿ ಇಷ್ಟು ಮಾತ್ರವಲ್ಲದೆ ಈತ ಇನ್ನು ಯಾವುದೆಲ್ಲ ಕೃತ್ಯಗಳನ್ನು ಮಾಡುತ್ತಿದ್ದಾನೋ? ಕೂಲಂಕುಶವಾಗಿ ತನಿಖೆ ನಡೆಸಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.